ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಲೋಕಸಭೆಯಲ್ಲಿ ಜನನ ಮತ್ತು ಮರಣ ನೋಂದಣಿ ತಿದ್ದುಪಡಿ ಮಸೂದೆಯನ್ನು ಮಂಡಿಸಿದೆ.
ಈ ತಿದ್ದುಪಡಿ ಮೂಲಕ ಇಡೀ ದೇಶದಲ್ಲಿ ಜನನ ಪ್ರಮಾಣಪತ್ರವೇ ಉಳಿದೆಲ್ಲ ಸರ್ಕಾರಿ ದಾಖಲೆಗಳನ್ನು ಪಡೆಯಲು ಆಧಾರವಾಗಲಿದೆ.
ಜನನ ಪ್ರಮಾಣ ಪತ್ರವೇ ಜನನ ದಿನಾಂಕ ಮತ್ತು ಹುಟ್ಟಿದ ಸ್ಥಳದ ಬಗ್ಗೆ ಏಕೈಕ ದಾಖಲೆಯಾಗಿದೆ. ಸಂಸತ್ತಿನಲ್ಲಿ ತಿದ್ದುಪಡಿ ಅಂಗೀಕಾರವಾದ ಬಳಿಕ ರಾಷ್ಟ್ರಪತಿಗಳು ತಿದ್ದುಪಡಿ ಮಸೂದೆಗೆ ಸಹಿ ಹಾಕಿದ ಬಳಿಕ ಜನಿಸುವ ಮಗುವಿಗೆ ಈ ನಿಯಮ ಅನ್ವಯವಾಗಲಿದೆ.
ಜನನ ಪ್ರಮಾಣಪತ್ರವನ್ನು ಉಳಿದ ದಾಖಲೆಗಳಾದ ಆಧಾರ್ ಕಾರ್ಡ್, ಪಡಿತರ ಚೀಟಿ, ಚಾಲನಾ ಪರವಾನಗಿ, ಆಸ್ತಿ ನೋಂದಣಿ, ಶಾಲಾ-ಕಾಲೇಜುಗಳಲ್ಲಿ ಪ್ರವೇಶಾತಿ ವೇಳೆ ಸಲ್ಲಿಕೆ ಮಾಡುವ ದಾಖಲೆ, ಮತದಾರರ ಗುರುತಿನ ಚೀಟಿ, ಸರ್ಕಾರಿ ನೌಕರಿ ಮತ್ತು ಇತರೆ ಸರ್ಕಾರಿ ದಾಖಲೆಗಳನ್ನು ಪಡೆಯಲು ಸಲ್ಲಿಸಬೇಕಾದ ಏಕೈಕ ಮೂಲ ದಾಖಲೆಯಾಗಲಿದೆ.
ಜನನ ಮತ್ತು ಮರಣ ನೋಂದಣಿ ಮಾಹಿತಿಗಳು ಆಧಾರ್ ಪ್ರಾಧಿಕಾರ, ಚುನಾವಣಾ ಆಯೋಗ, ಪಾಸ್ಪೋರ್ಟ್ ಸೇವಾ ಕೇಂದ್ರಗಳು, ಸಾರಿಗೆ ಇಲಾಖೆ, ನೋಂದಣಿ ಇಲಾಖೆ ಮತ್ತು ಇತರೆ ಅಗತ್ಯ ಸರ್ಕಾರಿ ಪ್ರಾಧಿಕಾರಗಳಿಗೆ ಲಭ್ಯವಾಗುವಂತೆ ಈ ಹೊಸ ಕಾನೂನಿನ ಮೂಲಕ ಕ್ರಮವಹಿಸಲಾಗುತ್ತದೆ.
ADVERTISEMENT
ADVERTISEMENT