ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಸೂಕ್ಷ್ಮ ವಿವಾದಗಳಿಗೆ ರಾಜ್ಯ ಬಿಜೆಪಿಯೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಳೆದ ಮೂರು ದಿನಗಳಿಂದ ಕಟು ಟೀಕೆ ಮಾಡುತ್ತಿದ್ದಾರೆ. ಇದಕ್ಕೆ BJP ಮಂಕು ತಿಮ್ಮನ ಕಗ್ಗದ ಸಾಲುಗಳನ್ನು ಉಲ್ಲೆಖಿಸಿ, ಕುಮಾರಸ್ವಾಮಿಯನ್ನು ಲೇವಡಿ ಮಾಡಿದೆ. ಆದರೇ, ಕುಮಾರಸ್ವಾಮಿ ಪ್ರಸ್ತಾಪಿಸಿದ ವಿಚಾರಗಳಿಗೆ BJP ಸ್ಪಷ್ಟನೆ ನೀಡುವ ಗೋಜಿಗೆ ಹೋಗಿಲ್ಲ.
BJP ಟ್ವೀಟ್ ಗಳಲ್ಲಿ ಏನಿದೆ?
ಕುಮಾರಸ್ವಾಮಿಯವರೇ, ನೀವೆಷ್ಟೇ ದಾರ್ಶನಿಕನ ಸೋಗು ಹಾಕಿದರೂ ಅದರ ಹಿಂದಿರುವುದು ಪ್ರತ್ಯೇಕ ಲೆಕ್ಕಾಚಾರವೇ. ನಿಮ್ಮಂತವರ ಯೂಟರ್ನ್ ನೀತಿಗಾಗಿಯೇ ಕಗ್ಗದಲ್ಲಿ ಸಾಲೊಂದು ರಚಿತವಾಗಿದೆ…
ಬಾನೊಳಿರುವುದೆ ಪಕ್ಷಿ ಪಾರ್ವ ದಾರಿಯ ನಕ್ಷೆ?
ಮೀನು ನೀರೊಳು ನುಸುಳೆ ಪಥನಿಯಮವಿಹುದೆ?
ಏನೊ ಜೀವನವನೆಳೆವುದೇನೊ ನೂಕುವುದದನು ।
ನೀನೊಂದು ಗಾಳಿಪಟ – ಮಂಕುತಿಮ್ಮ।।
ಕರ್ನಾಟಕದ ರಾಜಕಾರಣದಲ್ಲಿ ಎಚ್ಡಿಕೆ ಅವರಂತಹ ಗಾಳಿಪಟದ ವ್ಯಕ್ತಿತ್ವ ಹೊಂದಿರುವ ರಾಜಕಾರಣಿ ಮತ್ತೊಬ್ಬರಿಲ್ಲ.
ಆವ ಕಡೆ ಹಾರುವುದೋ!
ಆವ ಕಡೆ ತಿರುಗುವುದೋ?
ಆವಾಗಳಾವ ಕಡೆಗೆರಗುವುದೋ ಹಕ್ಕಿ!
ಎಂಬಂತಿದೆ ಎಚ್ಡಿಕೆ ರಾಜಕೀಯ ಧೋರಣೆ. ಸ್ವಂತಿಕೆ ಇಲ್ಲದವರು ವಾಜಪೇಯಿ ಅವರಂಥವರನ್ನೂ ಟೀಕಿಸುವುದು ಚೋದ್ಯವಲ್ಲದೆ ಮತ್ತೇನು?
ಅಡಿಜಾರಿ ಬೀಳುವುದು, ತಡವಿಕೊಂಡೇಳುವುದು ।
ಕಡುಬ ನುಂಗುವುದು, ಕಹಿಮದ್ದ ಕುಡಿಯುವುದು ॥
ದುಡುಕಿ ಮತಿದಪ್ಪುವುದು, ತಪ್ಪನೊಪ್ಪೆನ್ನುವುದು |
ಮಾಜಿ #LuckyDipCMHDK ಅವರಿಗೆ ಇದೇ ಬದುಕು ತಾನೇ? ಎಂದು ಬಿಜೆಪಿ ಟ್ವೀಟ್ ಮೂಲಕ ವ್ಯಂಗ್ಯವಾಗಿ ಪ್ರಶ್ನಿಸಿದೆ.