ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲಲು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರ ತಂತ್ರಗಳೇ ಕಾರಣ ಎಂಬ ಮಾತು ಪಕ್ಷದ ಪಡಸಾಲೆಯಲ್ಲಿ ಮೊದಲಿನಿಂದಲೂ ಕೇಳಿಬರುತ್ತಲೇ ಇತ್ತು.
ಇದೀಗ ಬಿಎಲ್ ಸಂತೋಷ್ ವಿರುದ್ಧ ಬಿಜೆಪಿಯಲ್ಲಿಯೇ ಅಸಮಾಧಾನ ಸ್ಫೋಟಗೊಂಡಿದೆ.
ಲೋಕಸಭೆ ಚುನಾವಣೆ ಸಂಬಂಧ ಬಿಎಲ್ ಸಂತೋಷ್ ಅವರ ಸೂಚನೆಯನ್ನು ಪಕ್ಷದ ನಾಯಕರೇ ಧಿಕ್ಕರಿಸತೊಡಗಿದ್ದಾರೆ.
ಸಂತೋಷ್ಜಿ ಸೂಚನೆ ನೀಡಿದ್ದಾರೆ. ಎಲ್ಲರೂ ಸಭೆಗೆ ಹಾಜರಾಗಬೇಕು ಎಂದು ಬೆಂಗಳೂರು ನಗರ ಶಾಸಕರಿಗೆ ಸುತ್ತೋಲೆ ಹೋಗಿತ್ತು. ಆದರೆ, ಬೆಂಗಳೂರು ನಗರದ ಯಾವೊಬ್ಬ ಬಿಜೆಪಿ ಶಾಸಕ ಕೂಡ ಈ ಸಭೆಯಲ್ಲಿ ಪಾಲ್ಗೊಳ್ಳಲಿಲ್ಲ ಎಂದು ತಿಳಿದುಬಂದಿದೆ.
ಈ ಮೂಲಕ ಹೈಕಮಾಂಡ್ ಮಟ್ಟದಲ್ಲಿ ನಂಬರ್ 3 ನಾಯಕ ಬಿಎಲ್ ಸಂತೋಷ್ ವಿರುದ್ಧ ತಮ್ಮ ಅಸಂತೋಷವನ್ನು ಬಿಜೆಪಿ ಶಾಸಕರು ತೋರ್ಪಡಿಸಿದ್ದಾರೆ. ಈ ಬೆಳವಣಿಗೆ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.
ಇತ್ತೀಚಿಗೆ ಮುಗಿದ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಎಲ್ಲಾ ವಿಚಾರಗಳಲ್ಲಿ ಬಿಎಲ್ ಸಂತೋಷ್ ಮಾತೇ ಹೈಕಮಾಂಡ್ ಮಟ್ಟದಲ್ಲಿ ನಡೆದಿತ್ತು.
ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಅವರ ಕಡೆಗಣನೆಯಲ್ಲೂ ಬಿಎಲ್ ಸಂತೋಷ್ ಪಾತ್ರ ಮಹತ್ವದ್ದಾಗಿದೆ.
ಹೀಗಾಗಿಯೇ ರಾಜ್ಯದಲ್ಲಿ ಬಿಜೆಪಿ ಸೋತಿದೆ ಎಂಬ ಮಾತು ಕೇಳಿಬಂದಿತ್ತು
ADVERTISEMENT
ADVERTISEMENT