ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ನಿನ್ನೆ ಸಂಸತ್ತಿನ ಹೊಸ ಕಟ್ಟಡಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದ ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದು ಎಳೆದೊಯ್ದಿದ್ದರು.
ಆದರೆ ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ ಕುಸ್ತಿ ಪಟುಗಳ ಬಗ್ಗೆ ಸುಳ್ಳು ಹಬ್ಬಿಸಿದ್ದಾರೆ.
ಪೊಲೀಸರ ವಶದಲ್ಲಿ ಪೊಲೀಸ್ ವ್ಯಾನ್ನಲ್ಲಿ ಹೋಗುವಾಗ ಸೆಲ್ಫಿ ತೆಗೆದುಕೊಂಡಿದ್ದ ಇಬ್ಬರು ಮಹಿಳಾ ಕುಸ್ತಿಪಟುಗಳು ನಗುತ್ತಿದ್ದರು, ಇವರ ಬಣ್ಣ ಬಯಲಾಗಿದೆ, ಇದು ಟೂಲ್ ಕಿಟ್ ಎಂದೆಲ್ಲ ಬಗೆಬಗೆಯ ನಿಂದನೆಗಳೊಂದಿಗೆ ಸುಳ್ಳು ಹಬ್ಬಿಸಿದ್ದರು.
ಆದರೆ ಅಸಲಿ ಚಿತ್ರದಲ್ಲಿ ಆ ಮಹಿಳಾ ಕುಸ್ತಿಪಟುಗಳು ನುಗತ್ತಿರಲಿಲ್ಲ.
ಬಿಜೆಪಿ ಕಾರ್ಯಕರ್ತರು AI (Artificial Intelligence) ತಂತ್ರಜ್ಞಾನ ಬಳಸಿ ಚಿತ್ರವನ್ನು ತಿರುಚಿ ಸುಳ್ಳು ಹಬ್ಬಿಸಿದ್ದಾರೆ.
ಅಸಲಿ ಚಿತ್ರ ಇದು ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಖ್ಯಾತ ಕುಸ್ತಿಪಟುಗಳು ಅಸಲಿ ಸೆಲ್ಫಿ ಚಿತ್ರವನ್ನು ಹಂಚಿಕೊಂಡಿದ್ದಾರೆ.
ವಿಚಿತ್ರ ಏನೆಂದರೆ ಪ್ರಮುಖ ಟಿವಿ ಸುದ್ದಿವಾಹಿನಿಗಳ ಪತ್ರಕರ್ತರು ಕೂಡಾ ಬಿಜೆಪಿಯವರು ತಿರುಚಿದ್ದ ಚಿತ್ರವನ್ನೇ ಅಸಲಿ ಎಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಿದ್ದು ಮಾತ್ರ ವಿಚಿತ್ರ.
ADVERTISEMENT
ADVERTISEMENT