2023ರಲ್ಲಿ ಸತತ ಎರಡನೇ ಬಾರಿಯೂ ಅಧಿಕಾರಕ್ಕೆ ಮರಳಲೇಬೇಕು ಎಂದು ಪಣತೊಟ್ಟಿರುವ ಬಿಜೆಪಿ ತನ್ನ ತಾಲೀಮು ಚುರುಕುಗೊಳಿಸಿದೆ. ಅನಿರೀಕ್ಷಿತವಲ್ಲವಾದರೂ ಕಣ್ಣೀರಿನ ವಿದಾಯ ಭಾಷಣದೊಂದಿಗೆ ಮುಖ್ಯಮಂತ್ರಿ ಗಾದಿಯಿಂದ ಯಡಿಯೂರಪ್ಪನವರು ಇಳಿದಿದ್ದು ಪಕ್ಷದ ಮುಂದಿನ ವರ್ಷದ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಮೂರು ಪ್ರಮುಖ ತಂಡಗಳನ್ನು ರಚಿಸಿದ್ದು ಆ ತಂಡಗಳಿಗೆ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ವಸ್ತುಸ್ಥಿತಿ ಅಡಿಯುವ ಜವಾಬ್ದಾರಿ ನೀಡಲಾಗಿದೆ.
ವಿಶೇಷ ಎಂದರೆ ಈ ರಣತಂತ್ರದಲ್ಲಿ ಯಡಿಯೂರಪ್ಪ ಅವರನ್ನೂ ದೆಹಲಿ ವರಿಷ್ಠರು ಬಳಸಿಕೊಂಡಿದ್ದಾರೆ.
ಬಿಜೆಪಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕರ್ನಾಟಕ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.
ನಳೀನ್ ಕುಮಾರ್ ಕಟೀಲ್ ತಂಡದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿದ್ದು, ಜೊತೆಗೆ ಸಚಿವ ವಿ ಸೋಮಣ್ಣ ಮತ್ತು ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥ್ ನಾರಾಯಣ ಕೂಡಾ ಇದ್ದಾರೆ.
ಅರುಣ್ ಸಿಂಗ್ ತಂಡದಲ್ಲಿ ಬಿಜೆಪಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಗೋವಿಂದ್ ಕಲ್ಸೋರೆ, ಆರ್ ಅಶೋಕ್ ಇದ್ದಾರೆ.
ಏಪ್ರಿಲ್ 12ರಂದು ಅರುಣ್ ಸಿಂಗ್ ತಂಡ ಬೆಳಗಾವಿ, ಉತ್ತರ ಕರ್ನಾಟಕದ ಪ್ರವಾಸ ಕೈಗೊಳ್ಳಲಿದೆ. ಕಟೀಲ್ ತಂಡ ಧಾರವಾಡದಲ್ಲಿ ಪ್ರವಾಸ ಆರಂಭಿಸಿ ಬಳ್ಳಾರಿಯತ್ತ ಸಾಗಲಿದೆ. ಸಿಎಂ ಬೊಮ್ಮಾಯಿ ತಂಡ ಮಂಗಳೂರು, ಶಿವಮೊಗ್ಗ, ಕಲ್ಬುರ್ಗಿಯಲ್ಲಿ ಪ್ರವಾಸ ಕೈಗೊಳ್ಳಲಿದೆ.
2 ದಿನಗಳ ಪ್ರವಾಸದ ವೇಳೆ ಶಾಸಕರ ಕ್ಷೇತ್ರಗಳ ಸ್ಥಿತಿಗತಿ ಮತ್ತು ಕೇಂದ್ರ ಸರ್ಕಾರದ ಯೋಜನೆಯ ಅನುಷ್ಠಾನಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ.