ಕರ್ನಾಟಕ ಬಿಜೆಪಿ ಘಟಕದ ಪುನರ್ ಸಂಘಟನೆ ಮಾಡಲಾಗಿದೆ.
ಮಾಜಿ ಇಂಧನ ಸಚಿವ, ಕಾರ್ಕಳ ಶಾಸಕ, ಬಿಲ್ಲವ ಸಮುದಾಯದ ವಿ ಸುನಿಲ್ ಕುಮಾರ್ ಅವರಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನೀಡಲಾಗಿದೆ. ಇಬ್ಬರು ಮಾಜಿ ಶಾಸಕರಾದ ಪ್ರೀತಂ ಗೌಡ ಮತ್ತು ಪಿ ರಾಜೀವ್ಗೂ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ.
ಬಿಜೆಪಿ ರಾಜ್ಯ ಘಟಕದಲ್ಲಿ ರಾಜ್ಯ ಉಪಾಧ್ಯಕ್ಷರ ನಂತರದ ಹುದ್ದೆ ಪ್ರಧಾನ ಕಾರ್ಯದರ್ಶಿ ಹುದ್ದೆ.
ಹೊಸ ಶಾಸಕರಿಗೆ ಮಣೆ:
ವಿಜಯೇಂದ್ರ ತಮ್ಮ ಹೊಸ ತಂಡದಲ್ಲಿ ಇಬ್ಬರು ಹೊಸ ಶಾಸಕರಿಗೆ ಪ್ರಮುಖ ಜವಾಬ್ದಾರಿ ನೀಡಿದ್ದಾರೆ.
ಯುವ ಮೋರ್ಚಾದ ಅಧ್ಯಕ್ಷರಾಗಿ ಮೊದಲ ಬಾರಿಗೆ ಶಾಸಕಾಗಿರುವ ಧೀರಜ್ ಮುನಿರಾಜ್ ಅವರನ್ನು ನೇಮಿಸಲಾಗಿದೆ.
ಎಸ್ ಸಿ ಮೋರ್ಚಾದ ರಾಜ್ಯಾಧ್ಯಕ್ಷರಾಗಿ ಸಕಲೇಶಪುರ ಶಾಸಕ ಎಸ್ ಮಂಜುನಾಥ್ ( ಸಿಮೆಂಟ್ ಮಂಜು) ಅವರನ್ನು ನೇಮಿಸಲಾಗಿದೆ. ಈ ಮೂಲಕ ಬಿಜೆಪಿಯಲ್ಲಿ ದಲಿತ ಸಮುದಾಯದ ಮುಖವಾಗಿ ಹೊರಹೊಮ್ಮಲಿಕ್ಕೆ ದೊಡ್ಡ ವೇದಿಕೆ ಸಿಕ್ಕಂತಾಗಿದೆ.