ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್ ಮಾರ್ಚ್ 17 ರಂದು ಬಿಡುಗಡೆಯಾಗಿ ಗಳಿಕೆಯಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿದೆ. ಈ ಚಿತ್ರಕ್ಕೆ ಇದೀಗ ಹೊಸ ಆತಂಕ, ಅಡ್ಡಿಗಳು ಎದುರಾಗಿದೆ. ಬಿಜೆಪಿ ನಾಯಕರೊಬ್ಬರು ಚಿತ್ರಮಂದಿರದಿಂದ ಜೇಮ್ಸ್ ಸಿನೆಮಾ ತೆಗೆಯುವಂತೆ ಒತ್ತಾಯ ಮಾಡಿದ್ದಾರೆ ಎಂದು ಹಲವು ಜನ ಆರೋಪಿಸುತ್ತಿದ್ದಾರೆ.
ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಆಕ್ರೊಶ ವ್ಯಕ್ತಪಡಿಸುತ್ತಿದ್ದಾರೆ.
ಅಪ್ಪು ಜನ್ಮದಿನದಂದು ಬಿಡುಗಡೆಯಾದ ಜೇಮ್ಸ್ ಸಿನೆಮಾ ಗಳಿಕೆಯಲ್ಲಿ 100 ಕೋ. ರೂಗಳ ಗಳಿಕೆಯನ್ನು ದಾಟಿದೆ. ಈ ಸಿನೆಮಾಗೆ ಇದೀಗ ಬಿಜೆಪಿ ಶಾಸಕರೊಬ್ಬರು ಅಡ್ಡಿ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ನ ಯುವ ಘಟಕದ ಮಾಜಿ ಅಧ್ಯಕ್ಷ ರಕ್ಷಾ ರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಕ್ಷಾ ರಾಮಯ್ಯ ಅವರು ಖಾಸಗಿ ವಾಹಿನಿಯ ಸುದ್ದಿಯನ್ನು ಕೋಟ್ ಮಾಡಿ, ನಾಡಿನ ನೆಲ, ಜಲ, ಭಾಷೆ, ಸಮಾಜ ಸೇವಕರನ್ನು ಅಗೌರವಿಸುವ ಪಕ್ಷ ನಾಡದ್ರೋಹಿ ಪಕ್ಷವಾಗಿರುತ್ತದೆ. ಕನ್ನಡಿಗರ ಸೇವೆ ಮಾಡುತ್ತಿರುವ ಡಾ ರಾಜ್ ಕುಮಾರ್ ಅವರ ಕುಟುಂಬಕ್ಕೆ ಅವಮಾನ ಮಾಡುತ್ತಿರುವ ಬಿಜೆಪಿ ‘ಏಕ ಭಾಷೆ’ ‘ಏಕ ನಾಯಕ’ ಎನ್ನುವ ನಾಡದ್ರೋಹಿ ಪಕ್ಷವಾಗಿದೆ ಎಂದಿದ್ದಾರೆ.
ನಾಡಿನ ನೆಲ, ಜಲ, ಭಾಷೆ, ಸಮಾಜ ಸೇವಕರನ್ನು ಅಗೌರವಿಸುವ ಪಕ್ಷ ನಾಡದ್ರೋಹಿ ಪಕ್ಷವಾಗಿರುತ್ತದೆ. ಕನ್ನಡಿಗರ ಸೇವೆ ಮಾಡುತ್ತಿರುವ ಡಾ ರಾಜ್ ಕುಮಾರ್ ಅವರ ಕುಟುಂಬಕ್ಕೆ ಅವಮಾನ ಮಾಡುತ್ತಿರುವ ಬಿಜೆಪಿ ‘ಏಕ ಭಾಷೆ’ ‘ಏಕ ನಾಯಕ’ ಎನ್ನುವ ನಾಡದ್ರೋಹಿ ಪಕ್ಷವಾಗಿದೆ. pic.twitter.com/xqAGXXjskK
— RR 🇮🇳 (@RakshaRamaiah) March 22, 2022
ಹಾಗೆಯೇ, ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಿದ್ದರಾಮಯ್ಯನವರು ಬಿಜೆಪಿಯ ನಾಯಕರು ಜೇಮ್ಸ್ ಸಿನೆಮಾಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇಂದು ಮಧ್ಯಾಹ್ನ ಕನ್ನಡದ ಖಾಸಗಿ ವಾಹಿನಿಯೊಂದು ಜೇಮ್ಸ್ ಸಿನೆಮಾಗೆ ಬಿಜೆಪಿ ನಾಯಕರಿಂದ ಅಡ್ಡಿಯಾಗುತ್ತಿದೆ ಎಂದು ವರದಿ ಮಾಡಿತ್ತು.
ಮಾಧ್ಯಮಗಳಿಗೆ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಜೇಮ್ಸ್ ಚಿತ್ರದ ನಿರ್ದೇಶಕ ಚೇತನ್ ಕುಮಾರ್, ಜೇಮ್ಸ್ ಸಿನೆಮಾಗೆ ಎಲ್ಲರೂ ಸಹಕರಿಸಬೇಕು. ಈ ಚಿತ್ರ ಕೇವಲ ಚಿತ್ರವಾಗಿ ಉಳಿಯದೇ ಕನ್ನಡಿಗರ ಭಾವನೆಯಾಗಿ ಬದಲಾಗಿದೆ. ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಆಸೆಯನ್ನು ನಿರಾಸೆ ಮಾಡಬೇಡಿ. ಚಿತ್ರಕ್ಕೆ ಸಹಕರಿಸಿ ಎಂದು ಕೇಳಿಕೊಂಡಿದ್ದಾರೆ.
ಜೇಮ್ಸ್ ಚಿತ್ರ ರಾಜ್ಯದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ತೆಲುಗಿನ ಫ್ಯಾನ್ ಇಂಡಿಯಾ ಚಿತ್ರ ‘RRR’ ರಾಜ್ಯದಲ್ಲಿಯೂ ಬಹು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರ ಮಾತ್ರವಲ್ಲದೇ, ಹಿಂದಿಯ ದಿ ಕಾಶ್ಮೀರ್ ಫೈಲ್ಸ್ ಸಿನೆಮಾವು ಜೇಮ್ಸ್ ಚಿತ್ರವು ಮತ್ತಷ್ಟು ಚಿತ್ರಮಂದಿರ ಕಳೆದುಕೊಳ್ಳಲು ಕಾರಣವಾಗುತ್ತಿವೆ.
https://youtu.be/ZR4gDXUKZ98