ADVERTISEMENT
ಲೋಕಸಭೆ ಮಾತ್ರವಲ್ಲ ಸಂಸತ್ತಿನ ಮೇಲ್ಮನೆ ರಾಜ್ಯಸಭೆಯಲ್ಲೂ ಬಿಜೆಪಿಗೆ ಬಹುಮತ ಇಲ್ಲ.
245 ಸದಸ್ಯ ಬಲದ ಲೋಕಸಭೆಯಲ್ಲಿ 233 ಸದಸ್ಯರು ವಿಧಾನಸಭೆಗಳಿಂದ ಆಯ್ಕೆಯಾಗುತ್ತಾರೆ. 12 ಮಂದಿ ಸಂಸದರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ.
ರಾಜ್ಯಸಭೆ ಕಾರ್ಯಾಲಯದ ಮಾಹಿತಿ ಪ್ರಕಾರ ಬಿಜೆಪಿ 86 ಸಂಸದರನ್ನು ಹೊಂದಿದೆ. ಕಾಂಗ್ರೆಸ್ 26, ಟಿಎಂಸಿ 13, ವೈಎಸ್ಆರ್ಪಿ ಕಾಂಗ್ರೆಸ್ 11, ಆಮ್ ಆದ್ಮಿ ಪಕ್ಷ -10, ಡಿಎಂಕೆ – 10, ಬಿಜು ಜನತಾ ದಳ -09 ಸಂಸದರನ್ನು ಹೊಂದಿದೆ.
ಆರ್ಜೆಡಿ-5, ಎಐಡಿಎಂಕೆ-05, ಬಿಆರ್ಎಸ್-4, ಸಿಪಿಐಎಂ – 4, ಜೆಡಿಯು-4, ಸಮಾಜವಾದಿ ಪಕ್ಷ -4 ಸಂಸದರನ್ನು ಹೊಂದಿದೆ.
ಸ್ವತಂತ್ರ ಸಂಸದರು -3, ಜೆಎಂಎಂ-3, ಸಿಪಿಐ-2, ಮುಸ್ಲಿಂ ಲೀಗ್ -2, ಎನ್ಸಿಪಿ -2, ಎನ್ಸಿಪಿ ಶರದ್ಪವಾರ್ ಬಣ -2, ಶಿವಸೇನೆ ಉದ್ಧವ್ ಠಾಕ್ರೆ ಬಣ -2, ಅಸ್ಸಾಂ ಗಣ ಪರಿಷತ್ -1., ಬಿಎಸ್ಪಿ-1, ಜೆಡಿಎಸ್ -1, ಕೇರಳ ಕಾಂಗ್ರೆಸ್ (ಮಣಿ0 -1, ಎಂಡಿಎಂಕೆ -1, ಮಿಜೋ ನ್ಯಾಷನಲ್ ಫ್ರಂಟ್ – 1, ಎನ್ಪಿಪಿ – 1, ಪಿಎಂಕೆ -1, ರಾಷ್ಟ್ರೀಯ ಲೋಕದಳ – 1, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ – 1, ಶಿವಸೇನೆ -1 , ಟಿಎಂಸಿ (ಎಂ) -1, ಯುಪಿಪಿ-1 ಸಂಸದರನ್ನು ಹೊಂದಿದೆ.
ರಾಜ್ಯಸಭೆಯಲ್ಲಿ ಮಸೂದೆಗಳ ಅಂಗೀಕಾರಕ್ಕೆ ಬೇಕಾಗಿರುವ ಸರಳ ಬಹುಮತ 123.
ಆದರೆ ಬಿಜೆಪಿ 86 ಸಂಸದರನ್ನು ಹೊಂದಿದ್ದರೆ, ಎನ್ಡಿಎ ಮೈತ್ರಿಕೂಟ ಒಟ್ಟು 101 ಸಂಸದರ ಬೆಂಬಲವನ್ನು ಹೊಂದಿದೆ.
ಬಿಜೆಪಿಗೆ ಮಸೂದೆಗಳ ಅಂಗೀಕಾರಕ್ಕೆ ಎನ್ಡಿಎ ಮಿತ್ರಪಕ್ಷಗಳ 15 ಸಂಸದರ ಬೆಂಬಲ ಮಾತ್ರವಲ್ಲದೇ ಎನ್ಡಿಎಯೇತರ ಪಕ್ಷಗಳ 12 ಸಂಸದರ ಬೆಂಬಲ ಅನಿವಾರ್ಯ. ಈಗಾಗಲೇ ಬಿಜು ಜನತಾ ದಳ ರಾಜ್ಯಸಭೆಯಲ್ಲಿ ಬಿಜೆಪಿಯನ್ನು ವಿರೋಧಿಸುವುದಾಗಿ ಘೋಷಿಸಿದೆ. ವೈಎಸ್ಆರ್ ಕಾಂಗ್ರೆಸ್ನ 11 ಮಂದಿ ಸಂಸದರನ್ನು ಈಗ ಬಿಜೆಪಿ ನೆಚ್ಚಿಕೊಳ್ಳುವುದು ಅನಿವಾರ್ಯವಾಗಿದೆ.
ಸಂಸತ್ತಿನ ಎರಡೂ ಸದನಗಳು ಮಸೂದೆಗೆ ಒಪ್ಪಿಗೆ ಕೊಟ್ಟರೆ ಮಾತ್ರ ಅದು ಕಾನೂನು ರೂಪದಲ್ಲಿ ಜಾರಿಗೆ ಬರಲು ಸಾಧ್ಯ. ಹೀಗಾಗಿ ರಾಜ್ಯಸಭೆಯಲ್ಲೂ ಬಹುಮತ ಇಲ್ಲದಿರುವುದು ಪ್ರಧಾನಿ ಮೋದಿ ಸರ್ಕಾರಕ್ಕೆ ಹೊಸ ತಲೆನೋವಾಗಿದೆ.
ADVERTISEMENT