ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಜಯದ ಬಳಿಕ ಈಗ ಲೋಕಸಭಾ ಉಪ ಚುನಾವಣೆಯಲ್ಲೂ ಬಿಜೆಪಿಗೆ ಭಾರೀ ಗೆಲುವು ಸಿಕ್ಕಿದೆ.
ರಾಂಪುರ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡಿದೆ. ಈ ಕ್ಷೇತ್ರದಲ್ಲಿ 2019ರಲ್ಲಿ ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ ಅವರು ಗೆದ್ದಿದ್ದರು.
ಈ ಮೂಲಕ ಅಜಂಖಾನ್ ಭದ್ರಕೋಟೆ ಛಿದ್ರವಾಗಿದೆ.
ಅಜಂಖಾನ್ ಅವರ ಒಂದು ಕಾಲದ ಪರಮಾಪ್ತ ಘನಶ್ಯಾಮ್ ಸಿಂಗ್ ಲೋಧಿ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು.
ಘನಶ್ಯಾಮ್ ಸಿಂಗ್ ಲೋಧಿ ಅವರಿಗೆ 3,67,104 ಮತಗಳು ಸಿಕ್ಕರೆ, ಅಜಂಖಾನ್ ಅವರ ಮತ್ತೊಬ್ಬ ಪರಮಾಪ್ತ ಎಸ್ಪಿ ಅಭ್ಯರ್ಥಿ ಮೊಹಮ್ಮದ್ ಆಸಿಂ ರಾಜಾಗೆ 325056 ಮತಗಳು ಸಿಕ್ಕಿವೆ.
ಈ ಸೋಲಿನೊಂದಿಗೆ ರಾಂಪುರದಲ್ಲಿ ಅಜಂಖಾನ್ ಪ್ರಾಬಲ್ಯ ಕುಗ್ಗಿದ್ದಲ್ಲದೇ ಸಮಾಜವಾದಿ ಪಕ್ಷಕ್ಕೆ ಮತ್ತೊಂದು ದೊಡ್ಡ ಮುಖಭಂಗವಾಗಿದೆ.
2019ರಲ್ಲಿ ಎಸ್ಪಿ ಮತ್ತು ಬಿಎಸ್ಪಿ ಮೈತ್ರಿಯ ಕಾರಣದಿಂದ ಅಜಂಖಾನ್ ಅವರು ಗೆದ್ದಿದ್ದರು. ಆದರೆ ಈ ಬಾರಿ ಇಲ್ಲಿ ಬಿಎಸ್ಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಯನ್ನೇ ಹಾಕಿಲ್ಲ.