ರಾಜ್ಯಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಮೊದಲ ಪ್ರಾಶಸ್ತö್ಯದ ಮತ ಎಣಿಕೆ ಮುಗಿದಿದ್ದು, ಬಿಜೆಪಿಯ ಮೂವರು ಮತ್ತು ಕಾಂಗ್ರೆಸ್ನ ಒಬ್ಬರು ರಾಜ್ಯಸಭೆಗೆ ಆಯ್ಕೆ ಆಗಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ 46 ಮೊದಲ ಪ್ರಾಶಸ್ತö್ಯದ ಮತ, ನಟ ಜಗ್ಗೇಶ್ಗೆ 44 ಮೊದಲ ಪ್ರಾಶಸ್ತö್ಯದ ಮತಗಳು ಸಿಕ್ಕಿದ್ದು, ಇಬ್ಬರೂ ರಾಜ್ಯಸಭೆ ಪ್ರವೇಶಿಸಿದ್ದಾರೆ.
ಬಿಜೆಪಿಗೆ ಮತ ಹಾಕಿದ ಜೆಡಿಎಸ್ ಶಾಸಕ..!
ಬಿಜೆಪಿ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಅವರಿಗೆ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಶ್ರೀನಿವಾಸ್ ಅವರು ಮೊದಲ ಪ್ರಾಶಸ್ತö್ಯದ ಮತ ಹಾಕಿದ್ದಾರೆ. ಈ ಮೂಲಕ ಲೆಹರ್ ಸಿಂಗ್ 33 ಮೊದಲ ಪ್ರಾಶಸ್ತö್ಯದ ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಇವರೂ ಅದೃಷ್ಟದಾಟದಲ್ಲಿ ಗೆದ್ದು ರಾಜ್ಯಸಭೆ ಪ್ರವೇಶಿಸಿದ್ದಾರೆ.
ಕಾಂಗ್ರೆಸ್:
ಕಾAಗ್ರೆಸ್ನ ಮೊದಲ ಅಭ್ಯರ್ಥಿ ಜೈರಾಂ ರಮೇಶ್ ಅವರಿಗೆ 46 ಶಾಸಕರ ಮೊದಲ ಪ್ರಾಶಸ್ತö್ಯದ ಮತಗಳು ಸಿಕ್ಕಿದ್ದು, ಆ ಮೂಲಕ ಅವರೂ ರಾಜ್ಯಸಭೆಗೆ ಮರು ಆಯ್ಕೆ ಆಗಿದ್ದಾರೆ.
ಎರಡನೇ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರಿಗೆ 25 ಮೊದಲ ಪ್ರಾಶಸ್ತö್ಯದ ಮತಗಳನ್ನು ಪಡೆದು ಸೋತಿದ್ದಾರೆ.
ಜೆಡಿಎಸ್:
ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ 30 ಶಾಸಕರ ಮೊದಲ ಪ್ರಾಶಸ್ತö್ಯದ ಮತಗಳು ಪಡೆದು ಸೋಲು ಅನುಭವಿಸಿದ್ದಾರೆ. ಜೆಡಿಎಸ್ ಇದ್ದ ಒಂದು ಸ್ಥಾನವನ್ನು ಕಳೆದುಕೊಂಡಿದೆ.