ADVERTISEMENT
ಧರ್ಮಸ್ಥಳದ ಕಡೆಗೆ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸ್ತಿದ್ದ ಆರೋಪದಡಿಯಲ್ಲಿ ನಾಲ್ವರನ್ನು ಬಂಧಿಸಲಾಗಿದ್ದು, 6 ದನ ಮತ್ತು 2 ಗಂಡು ಕರುಗಳನ್ನು ವಶಕ್ಕೆ ಪಡೆಯಲಾಗಿದೆ,
ಬಂಧಿತರಲ್ಲಿ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಬಿಜೆಪಿ ಕಾರ್ಯಕರ್ತ ಪ್ರಮೋದ್ ಸಾಲ್ಯಾನ್, ಒಳಗದ್ದೆ ನಿವಾಸಿ ಪುಷ್ಪರಾಜ್, ಹಾಸನ ಜಿಲ್ಲೆಯ ಅರಕಗೂಡು ತಾಲೂಕಿನ ಚನ್ನಕೇಶವ ಮತ್ತು ಹೊಳೆನರಸೀಪುರ ತಾಲೂಕಿನ ಹಿರೇಬೆಳಗುಳಿ ಗ್ರಾಮದ ಸಂದೀಪ್ ಸೇರಿದ್ದಾನೆ.
ಜುಲೈ 12ರಂದು ರಾತ್ರಿ ಧರ್ಮಸ್ಥಳ ಬಳಿಕ ಕನ್ಯಾಡಿಯಲ್ಲಿ ಧರ್ಮಸ್ಥಳ ಠಾಣೆ ಎಸ್ಐ ಅನಿಲ್ ಕುಮಾರ್ ನೇತೃತ್ವದಲ್ಲಿ ತಪಾಸಣೆ ಮಾಡುವ ಅಕ್ರಮ ಜಾನುವಾರು ಸಾಗಾಟ ಬಯಲಾಗಿದೆ.
ಜಾನುವಾರುಗಳನ್ನು ಮೂರು ವಾಹನಗಳಲ್ಲಿ ಸಾಗಿಸಲಾಗ್ತಿತ್ತು. ಈ ಜಾನುವಾರುಗಳ ಮೊತ್ತ 65 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.
ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ADVERTISEMENT