ದೊಡ್ಡಬಳ್ಳಾಪುರದಲ್ಲಿ (Doddaballapur) ನಡೆದ ಜನ ಸ್ಪಂದನ (Jana Spadana) ಕಾರ್ಯಕ್ರಮದಲ್ಲಿ ತಾಲ್ಲೂಕಿನ ಕೋರ ಹೋಬಳಿ ಹಿರೇತೊಟ್ಟುಕೆರೆ ನಿವಾಸಿ, ಬಿಜೆಪಿ ಕಾರ್ಯಕರ್ತ (BJP worker) ಸಿದ್ದಲಿಂಗಯ್ಯ (60) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಜನ ಸ್ಪಂದನ ಕಾರ್ಯಕ್ರಮಕ್ಕೆ ಕೊರಟಗೆರೆ ಬಿಜೆಪಿ (BJP) ಘಟಕದಿಂದ ಕಾರ್ಯಕರ್ತರನ್ನು ಕರೆದುಕೊಂಡು ಹೋಗಲಾಗಿತ್ತು.
ಹಿರೇತೊಟ್ಟುಕೆರೆ ಗ್ರಾಮದಿಂದಲೂ ಕಾರ್ಯಕರ್ತರು ತೆರಳಿದ್ದರು. ಸಮಾವೇಶದ ಸ್ಥಳಕ್ಕೆ ನಡೆದುಕೊಂಡು ಹೋಗುವಾಗ ಕುಸಿದು ಬಿದ್ದಿದ್ದಾರೆ.
ತಕ್ಷಣ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರೂ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.
ಯಡಿಯೂರಪ್ಪ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಸಾಧನೆಗಳನ್ನು ಬಿಂಬಿಸಿಕೊಳ್ಳಲು ಬಿಜೆಪಿ ಜನಸ್ಪಂದನ ಸಮಾವೇಶ ಆಯೋಜಿಸಿತ್ತು.
ADVERTISEMENT
ADVERTISEMENT