ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳ ಲಾಭ ಪಡೆದುಕೊಳ್ಳಲ್ಲ ಎಂದು ಬಿಜೆಪಿ ಕಾರ್ಯಕರ್ತರು ಶಪಥ ಮಾಡಿದ್ದಾರೆ.
ಐದು ಗ್ಯಾರಂಟಿಗಳೇನು..?
1)ಪ್ರತಿ ತಿಂಗಳಿಗೆ 200 ಯುನಿಟ್ ಉಚಿತ ವಿದ್ಯುತ್, 2)ಪ್ರತಿ ಕುಟುಂಬದ ಮನೆ ಯಜಮಾನಿಗೆ ಪ್ರತಿ ತಿಂಗಳಿಗೆ 2 ಸಾವಿರ ರೂಪಾಯಿ ಠೇವಣಿ ಜಮೆ, 3)ರಾಜ್ಯ ಸರ್ಕಾರದ ಬಸ್ಗಳಲ್ಲಿ ಮಹಿಳೆಯರಿಗೆ ರಾಜ್ಯದೊಳಗೆ ಎಲ್ಲೆಡೆಯೂ ಉಚಿತ ಪ್ರಯಾಣ, 4)ಅನ್ನಭಾಗ್ಯ ಯೋಜನೆಯಡಿಯಲ್ಲಿ ತಿಂಗಳಿಗೆ ಪ್ರತಿ ಕುಟುಂಬದ ಒಬ್ಬ ಸದಸ್ಯನಿಗೆ ತಲಾ 10 ಕೆಜಿ ಅಕ್ಕಿ ಮತ್ತು 5)ನಿರುದ್ಯೋಗಿ ಯುವಕ-ಯುವತಿಯರಿಗೆ ಪದವೀಧರರಿಗೆ 2 ವರ್ಷದವರೆಗೆ ತಿಂಗಳಿಗೆ ತಲಾ 3 ಸಾವಿರ ರೂಪಾಯಿ ಮತ್ತು ಡಿಪ್ಲೋಮಾ ಪದವೀಧರರಿಗೆ ಮಾಸಿಕ 1.5 ಸಾವಿರ ರೂಪಾಯಿ ನೀಡುವ ಗ್ಯಾರಂಟಿ ಯೋಜನೆ ಜಾರಿಯಾಗಿದೆ.
ಬಿಜೆಪಿ ಕಾರ್ಯಕರ್ತರ ಪ್ರತಿಜ್ಞೆ:
ADVERTISEMENT
ಗ್ಯಾರಂಟಿ ಯೋಜನೆಗಳ ಜಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿರುವ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ಐದೂ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.
ಈ ದೇಶದ ಸುಭದ್ರತ ದೃಷ್ಟಿಯಿಂದ, ಈ ರಾಜ್ಯದ ಹಿತದೃಷ್ಟಿಯಿಂದ ..ಐದು ಗ್ಯಾರಂಟಿ ಕಾರ್ಡ್ಗಳನ್ನು ಕೊಟ್ಟಿದ್ದಾರೆ ಅನ್ನಭಾಗ್ಯ ಯೋಜನೆ, ಬಸ್ ಪಾಸ್ ಉಚಿತ, ಯುವನಿಧಿ ಯೋಜನೆ, ಗೃಹ ಲಕ್ಷ್ಮೀ ಯೋಜನೆ ಆಗಿರಬಹುದು, 200 ಯುನಿಟ್ ಫ್ರೀ ಇರಬಹುದು ಈ ಐದೂ ಯೋಜನೆಗಳನ್ನು ನಾನು ನನ್ನ ಕುಟುಂಬ ಕೂತು ವೈಯಕ್ತಿಕ ನಿರ್ಧಾರ ಮಾಡಿ ಈ ದೇಶಕ್ಕೆ ಸಮರ್ಪಣೆಯನ್ನು ನಾನು ಮಾಡ್ತಾ ಇದ್ದೀನಿ.
ನಾನು ಒಬ್ಬ ಸ್ವಾಭಿಮಾನಿ. ನನ್ನ ಆರಾಧ್ಯ ದೇವ ಬಿ ಎಸ್ ಯಡಿಯೂರಪ್ಪಾಜಿ ಪಾದದ ಮೇಲೆ ಪ್ರಮಾಣ ಮಾಡಿ ಹೇಳ್ತಾ ಇದ್ದೀನಿ ಕಾಂಗ್ರೆಸ್ ಸರ್ಕಾರ ಸುಳ್ಳು ಭರವಸೆ ಕೊಟ್ಟು ಐದು ಗ್ಯಾರಂಟಿಗಳನ್ನು ಕೊಟ್ಟಿದೆ ಜನಾದೇಶ ಪಡೆದಿದೆ ,ನಾನು ಯಡಿಯೂರಪ್ಪಾಜಿ ಪಾದದ ಮೇಲಾಣೆ ..ನಾನು ಕಾಂಗ್ರೆಸ್ ಸರ್ಕಾರದ ಐದೂ ಗ್ಯಾರಂಟಿ ಯೋಜನೆಗಳನ್ನು ನಿರಾಕರಿಸ್ತಿದ್ದೀನಿ. ನಾನು ಬಿಜೆಪಿಯ ಕಟ್ಟಕಡೆಯ ಕಾರ್ಯಕರ್ತರ, ದೇವ ದುರ್ಲಭ ಕಾರ್ಯಕರ್ತ. ದೇಶಕ್ಕಾಗಿ ಸಮರ್ಪಣೆ ಮಾಡ್ತಿದ್ದೀನಿ
ಬಿಜೆಪಿ ಕಾರ್ಯಕರ್ತರು ಪ್ರತಿಜ್ಞೆ ಮಾಡಿದ್ದಾರೆ.
ADVERTISEMENT