ಮಾಜಿ ಪ್ರಧಾನಿ ದೇವೇಗೌಡರ ಹುಟ್ಟು ಹಬ್ಬದಂದು ಒಂದು ಕಡೆ ಬಿಜೆಪಿ ನಾಯಕರು ಶುಭಾಶಯ ಕೋರಿದರೆ, ಮತ್ತೊಂದೆಡೆ ಬಿಜೆಪಿ ಐಟಿ ಘಟಕ ಜೆಡಿಎಸ್ ಪಕ್ಷವನ್ನು ಕುಟುಂಬ ಪಕ್ಷವೆಂದು ವ್ಯಂಗ್ಯವಾಡಿದೆ.
2023 ರ ಚುನಾವಣೆಯಲ್ಲಿ 123 ಸೀಟುಗಳನ್ನು ಗೆಲ್ಲುವ ಗುರಿ ಹೊಂದಿರುವ ಜೆಡಿಎಸ್ ಪಕ್ಷ ಇತ್ತೀಚೆಗಷ್ಟೇ, ಜನತಾ ಸಂಕಲ್ಪ ಯಾತ್ರೆ ಮುಗಿಸಿತ್ತು. ಇದೀಗ ಪಂಚರತ್ನ ಎಂಬ ಕಾರ್ಯಕ್ರಮವನ್ನು ಜಾರಿ ಮಾಡಲು ಹೊರಟಿದೆ.
ಈ ಯೋಜನೆಯ ಬಗ್ಗೆ ವ್ಯಂಗ್ಯವಾಡಿರುವ ಬಿಜೆಪಿಯು, ನಿಮ್ಮ ಪಂಚರತ್ನ ಕಾರ್ಯಕ್ರಮಕ್ಕೆ ಶುಭವಾಗಲಿ. ಆದರೆ ಜೆಡಿಎಸ್ ಪಕ್ಷದ ಪಂಚರತ್ನ ಎಂದರೆ ಜನ ಬೇರೆಯದೇ ಮಾತನಾಡುತ್ತಾರೆ. ದೇವೇಗೌಡ, ರೇವಣ್ಣ, ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಇವರೇ ಜೆಡಿಎಸ್ ಪಂಚರತ್ನಗಳು. ಐದು ಕ್ಷೇತ್ರದ ಗೆಲುವೇ ಪಂಚರತ್ನ ಯೋಜನೆಯೇ? ಎಂದು ವ್ಯಂಗ್ಯವಾಡಿದೆ.
https://twitter.com/BJP4Karnataka/status/1526798980621172736?s=20&t=78jNaQlnBp-YMcSDX_cCRA
ಮತ್ತೊಂದು ಟ್ವೀಟ್ ಮಾಡಿರುವ ಬಿಜೆಪಿ, ಜೆಡಿಎಸ್ ಪಕ್ಷ ಹೇಳಿಕೊಳ್ಳುತ್ತಿರುವ ಮಿಶನ್ 123 ವಾಸ್ತವದಲ್ಲಿ ಮಿಶನ್ 123 ಅಲ್ಲ, ಅದು ಮಿಶನ್ 1+2+3! 1 – ದೇವೇಗೌಡ 2 – ಕುಮಾರ ಸ್ವಾಮಿ, ರೇವಣ್ಣ 3 – ಅನಿತಾ, ಪ್ರಜ್ವಲ್, ಸೂರಜ್ 1+2+3=6, ಅಂದರೆ ದೇವೇಗೌಡ ಕುಟುಂಬದ ಗೆಲುವೇ ಪಕ್ಷದ ಗೆಲುವೇ? ಇದು ಕುಟುಂಬವಾದ ಅಲ್ಲದೆ ಮತ್ತೇನು? ಎಂದು ಕುಚೋದ್ಯವಾಡಿದೆ.
https://twitter.com/BJP4Karnataka/status/1526798132381888512?s=20&t=78jNaQlnBp-YMcSDX_cCRA