ಬೆಂಗಳೂರಿನ ನಾಯಂಡನಹಳ್ಳಿ ಮತ್ತು ಹೆಬ್ಬಾಳ ನಡುವೆ ಬಿಎಂಟಿಸಿ ಐದು ಹೆಚ್ಚುವರಿ ಬಸ್ಗಳ ಓಡಾಟವನ್ನು ಇಂದಿನಿಂದ ಆರಂಭಿಸಿದೆ.
501 NH ಕ್ರಮ ಸಂಖ್ಯೆಯ ಐದು ಹೆಚ್ಚುವರಿ ಬಸ್ಗಳು ನಾಯಂಡನಹಳ್ಳಿ ಮತ್ತು ಹೆಬ್ಬಾಳ ಮಾರ್ಗದಲ್ಲಿ ಸಂಚರಿಸಲಿವೆ.
ನಾಯಂಡನಹಳ್ಳಿಯಿಂದ ಬೆಳಗ್ಗೆ 5.45ಕ್ಕೆ ಹೆಬ್ಬಾಳಕ್ಕೆ ಮೊದಲ ಬಸ್ ಪ್ರಯಾಣಿಸಲಿದ್ದು, ರಾತ್ರಿ 11 ಗಂಟೆ 55 ನಿಮಿಷಕ್ಕೆ ಕೊನೆಯ ಬಸ್ ಸಂಚಾರ ಆರಂಭಿಸಲಿದೆ.
ಹೆಬ್ಬಾಳದಿಂದ ನಾಯಂಡನಹಳ್ಳಿಗೆ ಬೆಳಗ್ಗೆ 5.20ಕ್ಕೆ ಮೊದಲ ಬಸ್ ಸಂಚರಿಸಲಿದ್ದು, ರಾತ್ರಿ 10 ಗಂಟೆ 20 ನಿಮಿಷಕ್ಕೆ ಕೊನೆಯ ಬಸ್ ಸಂಚರಿಸಲಿದೆ.
ADVERTISEMENT
ADVERTISEMENT