ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರ ಆರೋಗ್ಯ ಇತ್ತೀಚೆಗೆ ಹದಗೆಟ್ಟಿದ್ದು, ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಗಳ ಪ್ರಕಾರ, 81 ವರ್ಷದ ಈ ನಟನಿಗೆ ಇಂದು ಅನಾರೋಗ್ಯ ಉಂಟಾಗಿದೆ ಎನ್ನಲಾಗಿದ್ದು.. ಕೋಕಿಲಾಬೆನ್ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ದಾಖಲಿಸಲಾಗಿದೆ.. ವೈದ್ಯರು ನಿಗಾ ವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ನಟ ಆಸ್ಪತ್ರೆಗೆ ದಾಖಲಾದ ಬಗ್ಗೆ ತಿಳಿಯುವ ಒಂದು ಗಂಟೆಯ ಮೊದಲು ಬಿಗ್ ಬಿ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದು.. “ಟಿ 4950 – ಎಂದೆಂದಿಗೂ ಕೃತಜ್ಞತೆ.” ಎಂದು ಬರೆದುಕೊಂಡಿದ್ದಾರೆ.. ಇಷ್ಟೇ ಅಲ್ಲ.. ಇತ್ತೀಚೆಗಷ್ಟೇ ISPL ನಲ್ಲಿ ಕಾಣಿಸಿಕೊಂಡ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ. ಸದ್ಯ ಆಸ್ಪತ್ರೆಗೆ ದಾಖಲಾಗಿರುವ ನಟ ಅಮಿತಾಬ್ ಬಚ್ಚನ್ ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಅವರ ಪೋಸ್ಟ್ಗೆ ಕಾಮೆಂಟ್ ಮಾಡುತ್ತಿದ್ದಾರೆ..
ಇನ್ನು ನಟ ಅಮಿತಾಬ್ ಬಚ್ಚನ್ ಸದ್ಯ ಪ್ರಭಾಸ್ ಅಭಿನಯಿಸುತ್ತಿರುವ 2989 AD ಕಲ್ಕಿ ಚಿತ್ರದ ಭಾಗವಾಗಿದ್ದಾರೆ.. ಮೊನ್ನೆಯಷ್ಟೇ ಈ ಚಿತ್ರದ ಅಪ್ಡೇಟ್ವೊಂದನ್ನು ಹಂಚಿಕೊಂಡಿದ್ದು..”ನಿನ್ನೆ ರಾತ್ರಿ ಶೂಟಿಂಗ್ ಮುಗಿಸಿ ಬಂದಿದ್ದೇನೆ.. ಚಿತ್ರದ ಚಿತ್ರೀಕರಣ ಎಲ್ಲವೂ ಮುಗಿದಿದೆ. ಅಂದುಕೊಂಡಂತೆ ಮೇ 9ಕ್ಕೆ ಚಿತ್ರ ತೆರೆಕಾಣಲಿದೆ ಎಂದು” ಮಾಹಿತಿಯನ್ನು ಹಂಚಿಕೊಂಡಿದ್ದರು..