ರಾಜ್ಯದ ಸಿಎಂ ಸಿನೆಮಾ ಮಿನಿಸ್ಟರ್ ಆಗಿದ್ದಾರೆ ಎಂದು ಕಾಂಗ್ರೆಸ್ ಸಿಎಂ ಬೊಮ್ಮಾಯಿಯವರ ಮೇಲೆ ವ್ಯಂಗ್ಯವಾಡಿದೆ.
ಇದೇ ಸೋಮವಾರ ಮುಖ್ಯಮಂತ್ರಿ ಬೊಮ್ಮಾಯಿಯವರು ಸಚಿವ ಆರ್.ಅಶೋಕ್ ಅವರೊಡನೆ ರಕ್ಷಿತ್ ಶೆಟ್ಟಿ ನಟನೆಯ 777ಚಾರ್ಲಿ ಸಿನೆಮಾ ನೋಡಲು ಹೋಗಿದ್ದರು. ಈ ವೇಳೆ ಸಿನೆಮಾ ನೋಡುತ್ತಾ ಬೊಮ್ಮಾಯಿಯವರು ಕಣ್ಣೀರು ಹಾಕಿದ್ದರು.
ಇಂದು ಈ ಬಗ್ಗೆ ಟ್ವೀಟ್ ಮಾಡಿ ವ್ಯಂಗ್ಯವಾಡಿರುವ ಕಾಂಗ್ರೆಸ್, ರಾಜ್ಯದ CM ಅವರನ್ನು Cinema minister ಎಂದು ಕರೆಯುವುದು ಸೂಕ್ತವೇನೋ! ಸಿಎಂ ಸಿನೆಮಾ ನೋಡಿ ಕಣ್ಣೀರು ಹಾಕುವ ಭಾವುಕತೆ ಮೆಚ್ಚುವಂತದ್ದೇ, ಆದರೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಾಗ, ರಾಜ್ಯದ ಜನರ ಸಂಕಷ್ಟ ಅನುಭವಿಸಿದಾಗ, ಮಂಡ್ಯದಲ್ಲಿ ವೈದ್ಯಕೀಯ ಅವ್ಯವಸ್ಥೆ ನೋಡಿದಾಗ ಅವರ ಭಾವುಕತೆ ಮರೆಯಾಗಿಬಿಡುತ್ತದೆ! ಎಂದು ಟ್ವೀಟ್ ಮಾಡಿದೆ.
ರಾಜ್ಯದ CM ಅವರನ್ನು Cinema minister ಎಂದು ಕರೆಯುವುದು ಸೂಕ್ತವೇನೋ!
ಸಿಎಂ ಸಿನೆಮಾ ನೋಡಿ ಕಣ್ಣೀರು ಹಾಕುವ ಭಾವುಕತೆ ಮೆಚ್ಚುವಂತದ್ದೇ,
ಆದರೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಾಗ,
ರಾಜ್ಯದ ಜನರ ಸಂಕಷ್ಟ ಅನುಭವಿಸಿದಾಗ,
ಮಂಡ್ಯದಲ್ಲಿ ವೈದ್ಯಕೀಯ ಅವ್ಯವಸ್ಥೆ ನೋಡಿದಾಗ ಅವರ ಭಾವುಕತೆ ಮರೆಯಾಗಿಬಿಡುತ್ತದೆ! pic.twitter.com/rRdBx1qVQH— Karnataka Congress (@INCKarnataka) June 15, 2022