ಮಾಲೆ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಫೋಟೊಗಳನ್ನು ಅಪ್ಲೋಡ್ ಮಾಡಿದ ಒಂದೇ ಕಾರಣಕ್ಕೆ ಮಾಲ್ಡೀವ್ಸ್ ಸುಖಾಸುಮ್ಮನೆ ಬಿಕ್ಕಟ್ಟು ಸೃಷ್ಟಿಸಿದ್ದು, ಇದರಿಂದಾಗಿ 13 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಹೌದು, ಬ್ರೇನ್ ಟ್ಯೂಮರ್ ಹಾಗೂ ಸ್ಟ್ರೋಕ್ನಿಂದ (ಪಾರ್ಶ್ವವಾಯು) ಬಳಲುತ್ತಿದ್ದ ಬಾಲಕನೊಬ್ಬನನ್ನು ಭಾರತದ ವಿಮಾನದಲ್ಲಿ (Indian Aircraft) ಏರ್ಲಿಫ್ಟ್ ಮಾಡಲು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು (Mohamed Muizzu) ನೇತೃತ್ವದ ಸರ್ಕಾರ ಅನುಮತಿ ನೀಡಲು ವಿಳಂಬ ಧೋರಣೆ ಅನುಸರಿಸಿದ ಕಾರಣ 13 ವರ್ಷದ ಬಾಲಕ ಮೃತಪಟ್ಟಿದ್ದಾನೆ.
ಹೌದು, ಉತ್ತರ ಕೊರೊಲಿನಾದ ಗಾಫ್ ಆಲಿಫ್ ವಿಲ್ಲಿಂಗ್ಲಿಯಲ್ಲಿರುವ ದೂರದ ವಿಲ್ಮಿಂಗ್ಟನ್ ದ್ವೀಪದಲ್ಲಿ ವಾಸಿಸುವ 13 ವರ್ಷದ ಬಾಲಕನೊಬ್ಬನಿಗೆ ಸ್ಟ್ರೋಕ್ ಆಗಿದೆ. ಆತನು ಬ್ರೇನ್ ಟ್ಯೂಮರ್ನಿಂದ ಬಳಲುತ್ತಿರುವ ಕಾರಣ ಕ್ಷಿಪ್ರವಾಗಿ ಉನ್ನತ ಚಿಕಿತ್ಸೆಯ ಅನಿವಾರ್ಯತೆ ಉಂಟಾಗಿದೆ. ಆಗ ಆತನ ಪೋಷಕರು ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿರುವ ಆಸ್ಪತ್ರೆಗೆ ಏರ್ಲಿಫ್ಟ್ ಮಾಡಲು ಮುಂದಾಗಿದ್ದಾರೆ. ಭಾರತದ ವಿಮಾನದಲ್ಲಿ ಏರ್ಲಿಫ್ಟ್ ಮಾಡಲು ತೀರ್ಮಾನಿಸಿದ್ದು, ಮಾಲ್ಡೀವ್ಸ್ ಸರ್ಕಾರದ ಅನುಮತಿ ಕೇಳಿದ್ದಾರೆ.
ಚೀನಾ ಪರ ನಿಲುವು ಹೊಂದಿರುವ, ಚೀನಾವನ್ನು ಓಲೈಸುವ ಮೊಹಮ್ಮದ್ ಮುಯಿಜು ನೇತೃತ್ವದ ಸರ್ಕಾರವು ಭಾರತದ ವಿಮಾನದಲ್ಲಿ ಏರ್ಲಿಫ್ಟ್ ಮಾಡಲು ಅನುಮತಿ ನೀಡಿಲ್ಲ. ಅನುಮತಿ ನೀಡುವಂತೆ ಮನವಿ ಸಲ್ಲಿಸಿದ 16 ಗಂಟೆಯಾದರೂ ಮಾಲ್ಡೀವ್ಸ್ ಸರ್ಕಾರವು ಮಾನವೀಯತೆ ತೋರಿಸಿಲ್ಲ. ಇದರಿಂದಾಗಿ 13 ವರ್ಷದ ಬಾಲಕನು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಮಾಲ್ಡೀವ್ಸ್ ಸರ್ಕಾರದ ಧೋರಣೆಯನ್ನು ಬಾಲಕನ ಕುಟುಂಬಸ್ಥರು ತೀವ್ರವಾಗಿ ಖಂಡಿಸಿದ್ದಾರೆ. ಇದು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯೂ ಆಗಿದೆ.