ADVERTISEMENT
ಮುಂದಿನ ವರ್ಷ ಚುನಾವಣೆಯ ನಡೆಯಲಿರುವ ನಾಗಾಲ್ಯಾಂಡ್ (Nagaland) ರಾಜ್ಯದಲ್ಲಿ ಬಿಜೆಪಿ ಅಲ್ಲಿನ ಪ್ರಮುಖ ಚರ್ಚ್ (Church) ಎದುರು ಬಹಿರಂಗ ಕ್ಷಮೆಯಾಚಿಸಿ ತಪ್ಪನ್ನು ಮನ್ನಿಸುವಂತೆ ಬೇಡಿಕೊಂಡಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನ್ಯಾಗಲ್ಯಾಂಡ್ಗೆ ಮೊಟ್ಟ ಮೊದಲ ಬಾರಿಗೆ ಭೇಟಿ ನೀಡಿದ ಜೆ ಪಿ ನಡ್ಡಾ (J P Nadda) ಅವರು ಗುಡ್ಡುಗಾಡು ರಾಜ್ಯದ ( Hill State) ಪ್ರಮುಖ ಚರ್ಚ್ಗಳಲ್ಲಿ ಒಂದಾಗಿರುವ ಕೊಹಿಲಾ ಆವೋ ಬ್ಯಾಪಿಸ್ಟ್ ಆರೋಗೋ (Kohima Ao Baptist Church) (KABA) ಚರ್ಚ್ಗೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸೋರಿಕೆ ಆಗಿತ್ತು.
ಕ್ರಿಶ್ಚಿಯನ್ ಧರ್ಮದವರೇ ಅತ್ಯಧಿಕ ಇರುವ ಗುಡ್ಡಗಾಡು ರಾಜ್ಯದಲ್ಲಿ ಚರ್ಚ್ಗೆ ಬಿಜೆಪಿ ಅಧ್ಯಕ್ಷರು ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಸೋರಿಕೆಯಿಂದ ಬಿಜೆಪಿಯೇ ಮುಜುಗರಕ್ಕೀಡಾಗಿತ್ತು.
ಈ ಹಿನ್ನೆಲೆಯಲ್ಲಿ ನಾಗಲ್ಯಾಂಡ್ ಬಿಜೆಪಿ ಬಹಿರಂಗ ಕ್ಷಮೆಯಾಚಿಸಿ (Apology) ಪ್ರಕಟಣೆ ಹೊರಡಿಸಿದೆ.
ಕಾಬಾ(KABA) ಹೊಂದಿರುವ ಒಳ್ಳೆಯ ಹೆಸರನ್ನು ಎಳೆದು ತರುವ ಕೆಟ್ಟ ಉದ್ದೇಶ ನಮ್ಮದ್ದಲ್ಲ. ಚರ್ಚ್ ಈಗಾಗಲೇ ಪೂರ್ವ ನಿರ್ಧರಿತ ಕಾರ್ಯಕ್ರಮಗಳಲ್ಲಿ ನಿರತವಾಗಿರುವ ಕಾರಣ ನಮ್ಮ ಆಹ್ವಾನವನ್ನು ಚರ್ಚ್ ತಿರಸ್ಕರಿಸಿದ್ದು ಸೂಕ್ತವಾಗಿದೆ.
ನಡ್ಡಾ ಅವರ ಪ್ರವಾಸದ ಮಾಹಿತಿ ಹೇಗೆ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆ ಆಗಿತ್ತು ಎಂಬುದು ನಮಗೆ ತಿಳಿದಿಲ್ಲ.
ನಾವು ಕೊಹಿಲಾ ಆವೋ ಬ್ಯಾಪಿಸ್ಟ್ ಆರೋಗೋ ಎದುರು ಪ್ರಾಮಾಣಿಕ ಕ್ಷಮೆಯನ್ನು ಬೇಡುತ್ತಿದ್ದೇವೆ. ಭಾರತೀಯ ಜನತಾ ಪಕ್ಷ ಮತ್ತು ಚರ್ಚ್ನ ತೇಜೋವಧೆ ಮಾಡಲು ಅನೈತಿಕ ಶಕ್ತಿಗಳ ಪ್ರಯತ್ನದಿಂದ ಆಗಿರುವ ಮುಜುಗರಕ್ಕೆ ಪ್ರಾಮಾಣಿಕ ಕ್ಷಮೆ ಕೇಳುತ್ತೇವೆ
ಬಿಜೆಪಿ ಕ್ಷಮೆ ಕೇಳಿದೆ.
ADVERTISEMENT