ADVERTISEMENT
ADVERTISEMENT
ಕಾಂಗ್ರೆಸ್ ನಾಯಕಿ, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪನವರ ಧವಳಗಿರಿ ನಿವಾಸಕ್ಕೆ ತೆರಳಿ ಹೆಬ್ಬಾಳ್ಕರ್ ಮಾತುಕತೆ ನಡೆಸಿದ್ದಾರೆ.
ಇವತ್ತು ಗುರುಪೂರ್ಣಿಮೆ ದಿನವಾಗಿರುವ ಕಾರಣ ಲಿಂಗಾಯತ ಸಮುದಾಯದ ಲಕ್ಷ್ಮೀ ಅವರ ಯಡಿಯೂರಪ್ಪ ಭೇಟಿ ಮಹತ್ವ ಪಡೆದಿದೆ.
ಯಡಿಯೂರಪ್ಪ ಮಾರ್ಗದರ್ಶನ ಹಾಗೂ ಸಮಾಜದ ಬೆಳವಣೆಗೆಯ ಕುರಿತು ಸುಧೀರ್ಘ ಕಾಲ ಚರ್ಚಿಸಲಾಯಿತು ಮತ್ತು ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಸಂಬಂಧ ಚರ್ಚೆ ನಡೆದಿದೆ.
ಈ ಭೇಟಿಯ ವೇಳೆ ಲಕ್ಷ್ಮೀ ಅವರ ಪುತ್ರ ಪುತ್ರ Mrinal Hebbalkar ಕೂಡಾ ಇದ್ದರು. ಅವರ ಭವಿಷ್ಯ ಉಜ್ವಲವಾಗಿರಲೆಂದು ಮಾನ್ಯ ಯಡಿಯೂರಪ್ಪನವರು ಶುಭ ಹಾರೈಸಿದ್ದಾರೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಮೂರು ದಿನಗಳ ಹಿಂದೆಯಷ್ಟೇ ಯಡಿಯೂರಪ್ಪ ಮತ್ತು ವಿಜಯೇಂದ್ರರನ್ನು ರಾಜಕೀಯವಾಗಿ ಮುಗಿಸಲಾಗುತ್ತಿದೆ ಎಂದು ಹೇಳಿ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರಣಿ ಟ್ವಿಟ್ ಮಾಡಿದ್ದರು.