ADVERTISEMENT
ಶಿಮಮೊಗ್ಗ (Shivamogga) ಮತ್ತು ಭದ್ರಾವತಿಯಲ್ಲಿ (Bhadravati) ನಿಷೇಧಾಜ್ಞೆ ಜಾರಿ ಆಗಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿರುವ ಕುವೆಂಪು ವಿವಿ (Kuvempu VV) ಪರೀಕ್ಷೆಯನ್ನು ಮುಂದೂಡಿದೆ.
ನಾಳೆ ಕುವೆಂಪು ವಿವಿಗೆ ಒಂದು ದಿನ ರಜೆ ಘೋಷಿಸಲಾಗಿದೆ. ಹೀಗಾಗಿ ನಾಳೆ ನಡೆಯಬೇಕಿದ್ದ ಪರೀಕ್ಷೆಗಳನ್ನೂ ಮುಂದೂಡಲಾಗಿದೆ ಎಂದು ಕುಲಪತಿ ಪ್ರೊ. ವೀರಭದ್ರಪ್ಪ ಹೇಳಿದ್ದಾರೆ.
ನಾಳೆ ಎಂಎಸ್ಸಿ (ಹಾನರ್ಸ್) ಮತ್ತು ಪಿಎಚ್ಡಿ ಕೋರ್ಸ್ ವರ್ಕ್ ಪರೀಕ್ಷೆಗಳು ನಿಗದಿ ಆಗಿದ್ದವು.
ಹೊಸ ಪರೀಕ್ಷಾ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ.
ADVERTISEMENT