ಕಾಂಗ್ರೆಸ್ನ ಹಿರಿಯ ನಾಯಕ, ಸಜ್ಜನ ರಾಜಕಾರಣಿ ಮಾಜಿ ಸಂಸದ ಮುದ್ದ ಹನುಮೇಗೌಡ ಅವರು ಕಾಂಗ್ರೆಸ್ ಪಕ್ಷಕ್ಕೆ ವಿದಾಯ ಹೇಳುವ ಸಾಧ್ಯತೆ ನಿಚ್ಚಳವಾಗಿದೆ. ಮಾಹಿತಿಗಳ ಪ್ರಕಾರ ಮುದ್ದಹನುಮೇಗೌಡ ಅವರು ಶೀಘ್ರವೇ ಬಿಜೆಪಿಗೆ ಸೇರಲಿದ್ದಾರೆ ಎನ್ನಲಾಗ್ತಿದೆ.
ಡಿಕೆಶಿಯೂ ಕಾರಣ:
ತುಮಕೂರು ಜಿಲ್ಲೆ ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಮುದ್ದಹನುಮೇಗೌಡ ಅವರು ಕಾಂಗ್ರೆಸ್ ಟಿಕೆಟ್ ಬಯಸಿದ್ದಾರೆ. ಆದರೆ ಈ ಬಾರಿ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ. ಕಾರಣ ಕುಣಿಗಲ್ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಅವರ ಕೋ-ಬ್ರದರ್ ಡಾ ಹೆಚ್ ಡಿ ರಂಗನಾಥ್ ಶಾಸಕರಾಗಿದ್ದಾರೆ. ಈ ಬಾರಿಯೂ ಡಿಕೆಶಿ ಸಂಬAದಿಗೆ ಕಾಂಗ್ರೆಸ್ ಟಿಕೆಟ್ ಸಿಗುವ ಬಹುತೇಕ ನಿಚ್ಚಳವಾಗಿದೆ.
ನಂಬಿಸಿ ವಂಚಿಸಿತೇ ಕಾಂಗ್ರೆಸ್..?
2014ರಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ನಿAದ ಗೆದ್ದು ಮುದ್ದಹನುಮೇಗೌಡ ಸಂಸದರಾಗಿದ್ದರು. ಆದರೆ 2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷದ ಜಂಟಿ ಅಭ್ಯರ್ಥಿ ಆಗಿ ಮಾಜಿ ಪ್ರಧಾನಿ ದೇವೇಗೌಡರನ್ನು ಕಣಕ್ಕಿಳಿಸಲಾಗಿತ್ತು. ಆದರೆ ದೇವೇಗೌಡರು ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜು ವಿರುದ್ಧ ಸೋಲುವ ಮೂಲಕ ಮೈತ್ರಿಕೂಟಕ್ಕೆ ಅದರಲ್ಲೂ ಜೆಡಿಎಸ್ಗೆ ಮುಖಭಂಗವಾಗಿತ್ತು.
ಮೈತ್ರಿಕೂಟದ ಕಾರಣದಿಂದ ಮುದ್ದಹನುಮೇಗೌಡ ಅವರಿಗೆ ಲೋಕಸಭಾ ಟಿಕೆಟ್ ನಿರಾಕರಿಸಲಾಗಿತ್ತು. ಒಂದು ವೇಳೆ ಮೈತ್ರಿಕೂಟದಿಂದ ಮುದ್ದಹನುಮೇಗೌಡರಿಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿದ್ದರೆ ಬಿಜೆಪಿಯ ಬಸವರಾಜು ವಿರುದ್ಧ ಸುಲಭವಾಗಿ ಗೆಲ್ಲುತ್ತಿದ್ದರು ಎನ್ನುವುದು ಕ್ಷೇತ್ರದ ಮತದಾರರ ಮಾತು.
ಈ ನಡುವೆ ಹಾಲಿ ಸಂಸದರಾಗಿದ್ದ ಮುದ್ದಹನುಮೇಗೌಡ ಅವರಿಗೆ `ತುಮಕೂರು ತ್ಯಾಗ’ಕ್ಕಾಗಿ ಸೂಕ್ತ ಸ್ಥಾನಮಾನ ನೀಡುವುದಾಗಿ ಹೈಕಮಾಂಡ್ ಹೇಳಿತ್ತು. ಆದರೆ ಆ ಭರವಸೆಯನ್ನು ಕಾಂಗ್ರೆಸ್ ಈಡೇರಿಸಲೇ ಇಲ್ಲ. ರಾಜ್ಯಸಭಾ ಚುನಾವಣೆ ಮತ್ತು ವಿಧಾನಪರಿಷತ್ ಚುನಾವಣೆಯಲ್ಲೂ ಮುದ್ದಹನುಮೇಗೌಡ ಅವರಿಗೆ ಟಿಕೆಟ್ ನಿರಾಕರಿಸುವ ಮೂಲಕ ಕೊಟ್ಟ ಮಾತನ್ನು ದೆಹಲಿ ನಾಯಕರು ತಪ್ಪಿದರು ಎಂಬ ನೋವನ್ನು ಹಲವು ಸಂದರ್ಶನಗಳಲ್ಲಿ ಮುದ್ದಹನುಮೇಗೌಡರು ಹೇಳಿಕೊಂಡಿದ್ದಾರೆ.
ಕುಣಿಗಲ್ ಟಿಕೆಟ್ಗೆ ಪಟ್ಟು:
ಲೋಕಸಭಾ ಕ್ಷೇತ್ರವನ್ನು ತ್ಯಾಗ ಮಾಡಿದ್ದಕ್ಕೆ ಪ್ರತಿಯಾಗಿ ಈ ಬಾರಿ ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಬೇಕು ಎನ್ನುವುದು ಮುದ್ದಹನುಮೇಗೌಡ ಅವರ ಪಟ್ಟು. ಒಂದು ವೇಳೆ ಟಿಕೆಟ್ ಸಿಗದೇ ಹೋದರೂ ಸ್ಪರ್ಧಿಸುವುದಾಗಿ ಮುದ್ದಹನುಮೇಗೌಡರು ಘೋಷಿಸಿದ್ದಾರೆ. ಆದರೆ ಕಾಂಗ್ರೆಸ್ನಲ್ಲಿ ಈ ಬಾರಿ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಅವರು ಬಿಜೆಪಿ ಕಡೆ ಮುಖ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.
ಮುದ್ದಹನುಮೇಗೌಡರಿಗೆ ಗೆಲುವು ಪಕ್ಕಾನಾ..?:
ಒಂದು ವೇಳೆ ಮುದ್ದಹನುಮೇಗೌಡರು ಬಿಜೆಪಿ ಸ್ಪರ್ಧಿಸಿದರೆ ಕುಣಿಗಲ್ನಲ್ಲಿ ಅವರಿಗೆ ಗೆಲುವು ಪಕ್ಕಾನಾ..? ಮುದ್ದಹನುಮೇಗೌಡರು ಈಗಾಗಲೇ ಎರಡು ಬಾರಿ ಕುಣಿಗಲ್ ಶಾಸಕರಾಗಿದ್ದಾರೆ. 1994 ಮತ್ತು 1999ರಲ್ಲಿ ಸತತ ಎರಡು ಬಾರಿ ಗೆಲುವು ಸಾಧಿಸಿದ್ದಾರೆ. ಅದಾದ ಬಳಿಕ ಇವರು ಕುಣಿಗಲ್ನಲ್ಲಿ ವಿಧಾನಸಭಾ ಚುನಾವಣೆಗೆ ನಿಂತಿಲ್ಲ.
2018ರಲ್ಲಿ ಕಾಂಗ್ರೆಸ್ನಿAದ ಡಿಕೆಶಿ ಸಂಬAಧಿ ಡಾ ಹೆಚ್ ಡಿ ರಂಗನಾಥ್ 5,600 ಮತಗಳ ಅಂತರದಿAದ ಗೆದ್ದಿದ್ದರು. 2013ರಲ್ಲಿ ಜೆಡಿಎಸ್ ಈ ಕ್ಷೇತ್ರದಲ್ಲಿ ಗೆದ್ದಿತ್ತಾದರೂ 2018ರ ಚುನಾವಣೆಯಲ್ಲಿ ಜೆಡಿಎಸ್ ಮೂರನೇ ಸ್ಥಾನಕ್ಕೆ ಕುಸಿದು ಬಿಜೆಪಿ 2ನೇ ಸ್ಥಾನಕ್ಕೆ ಜಿಗಿಯಿತು. ಬಿಜೆಪಿಯ ಡಿ ಕೃಷ್ಣಕುಮಾರ್ ಶೇಕಡಾ 32ರಷ್ಟು ಅಂದರೆ 53,097 ಮತಗಳನ್ನು ಪಡೆದು ಕಾಂಗ್ರೆಸ್ಗೆ ಪ್ರಬಲ ಪ್ರತಿಸ್ಪರ್ಧೆ ನೀಡಿದರು. ಬಿಜೆಪಿಯ ಈ ಮತಗಳಿಕೆಯನ್ನು ನೋಡಿದರೆ 2023ರಲ್ಲಿ ಅಂದರೆ ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕುಣಿಗಲ್ನಿಂದ ಒಂದು ವೇಳೆ ಮುದ್ದಹನುಮೇಗೌಡ ಅವರಿಗೆ ಬಿಜೆಪಿ ಟಿಕೆಟ್ ನೀಡಿದರೆ ಆ ಕ್ಷೇತ್ರ ಕಾಂಗ್ರೆಸ್ ಕೈ ತಪ್ಪಬಹುದು.
ಸಜ್ಜನ ರಾಜಕಾರಣಿ, ನ್ಯಾಯಾಧೀಶ ಮತ್ತು ವಕೀಲ:
ಕಾಂಗ್ರೆಸ್ನ ಸಜ್ಜನ ರಾಜಕಾರಣಿಗಳಲ್ಲಿ ಮುದ್ದಹನುಮೇಗೌಡ ಕೂಡಾ ಒಬ್ಬರು. ಐದು ವರ್ಷ ಜಿಲ್ಲಾ ನ್ಯಾಯಾಧೀಶರೂ ಆಗಿದ್ದರು. ವೃತ್ತಿಯಲ್ಲಿ ವಕೀಲರೂ ಆಗಿರುವ ಇವರು ಕೆಲ ತಿಂಗಳಿAದ ರೈತ ಪರವಾದ ವಾಜ್ಯಗಳಲ್ಲಿ ರೈತರ ಪರವಾಗಿ ವಕಾಲತ್ತು ಮಾಡುತ್ತಿದ್ದಾರೆ.