ಗೋವಾದ ರಾಜಕಾರಣದಲ್ಲಿ (Goa Politics) ಪಕ್ಷಾಂತರ ಪರ್ವ ಮತ್ತೆ ಮುನ್ನೆಲೆಗೆ ಬಂದಿದೆ. ಗೋವಾದಲ್ಲಿ 8 ಜನ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂದು ಬಿಜೆಪಿ ಗೋವಾ ರಾಜ್ಯಾಧ್ಯಕ್ಷ ಸದಾನಂದ್ ತನವಾಡೆ ತಿಳಿಸಿದ್ದಾರೆ.
ಗೋವಾ ಕಾಂಗ್ರೆಸ್ನ 11 ಜನ ಶಾಸಕರಲ್ಲಿ 8 ಜನ ಶಾಸಕರು ಬಿಜೆಪಿಗೆ ಇಂದು ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಪ್ರಮುಖ ನಾಯಕರುಗಳಾದ ದಿಗಂಬರ್ ಕಾಮತ್, ಮಿಚೆಲ್ ಲೋಬೊ ಸೇರಿದಂತೆ ಡೆಲಿಲ್ಹಾ ಲೋಬೊ, ರಾಜೇಶ್ ಪಾಲ್ದೇಸಾಯ್, ಕೇದಾರ್ ನಾಯ್ಕ್, ಸಂಕಲ್ಪ್ ಅಮೋಂಕರ್, ಅಲೆಕ್ಸೊ ಸಿಕ್ವೇರಾ ಮತ್ತು ರುಡಾಲ್ಫ್ ಫರ್ನಾಂಡೀಸ್ ಬಿಜೆಪಿ ಸೇರಲು ಸಜ್ಜಾಗಿದ್ದಾರೆ. ಇದನ್ನೂ ಓದಿ : ಗೋವಾ : ಇಬ್ಬರು ಶಾಸಕರ ಅನರ್ಹಗೊಳಿಸಲು ಸ್ಪೀಕರ್ಗೆ ಕಾಂಗ್ರೆಸ್ ಅರ್ಜಿ
ಇಂದು ಬಿಜೆಪಿಯ ಮುಖ್ಯಮಂತ್ರಿ ಪ್ರಮೋದ್ ಸಾವಂತ್ರನ್ನು ಈ ಕಾಂಗ್ರೆಸ್ ಶಾಸಕರ ತಂಡ ಬೇಟಿಯಾಗಿದೆ. ಆ ಬಳಿಕ ವಿಧಾನಸಭಾ ಸ್ಪೀಕರ್ರನ್ನು ಈ ತಂಡ ಭೇಟಿಯಾಗಿದೆ. ಸದನ ನಡೆಯದೇ ಇರುವ ಸಮಯದಲ್ಲಿ ಸ್ಪೀಕರ್ರನ್ನು ಭೇಟಿಯಾದ ಬಗ್ಗೆ ಕುತೂಹಲ ಮೂಡಿದೆ.
3 ರಲ್ಲಿ 2 ರಷ್ಟು ಜನ ಶಾಸಕರು ಬಿಜೆಪಿಗೆ ಸೇರ್ಪಡೆ ಆಗುತ್ತಿರುವುದರಿಂದ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ.
2 ತಿಂಗಳುಗಳ ಹಿಂದೆಯಷ್ಟೇ ಗೋವಾ ಕಾಂಗ್ರೆಸ್ನ (Goa Politics) ಶಾಸಕರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ವದಂತಿ ಹಬ್ಬಿತ್ತು. ಆ ಬೆನ್ನಲ್ಲೇ, ಎಚ್ಚೆತ್ತಿದ್ದ ಕಾಂಗ್ರೆಸ್ ಎಲ್ಲಾ ಶಾಸಕರನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡಿತ್ತು. ಈ ಸಮಯದಲ್ಲಿ ಕಾಂಗ್ರೆಸ್ ನಾಯಕರಾದ ದಿಗಂಬರ್ ಕಾಮತ್ ಮತ್ತು ಮಿಚೆಲ್ ಲೋಬೊರನ್ನು ಶಾಸಕತ್ವ ಸ್ಥಾನದಿಂದ ವಜಾ ಮಾಡುವಂತೆ ಸ್ಪೀಕರ್ಗೆ ಮನವಿ ಮಾಡಿಕೊಂಡಿತ್ತು.
2019 ರಲ್ಲಿಯೂ ಇಂತಹದ್ದೇ ಒಂದು ಘಟನೆ ನಡೆದಿತ್ತು. ಆಗಿನ 15 ಜನ ಕಾಂಗ್ರೆಸ್ ಶಾಸಕರಲ್ಲಿ 10 ಜನ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಹಾಗೆಯೇ, ಪಕ್ಷಾಂತರ ನಿಷೇಧ ಕಾಯ್ದೆಯ ಕುಣಿಕೆಯಿಂದ ಪಾರಾಗಿದ್ದರು. ಇದನ್ನೂ ಓದಿ : ಗೋವಾ : ಸಚಿವೆ ಸ್ಮೃತಿ ಇರಾನಿ ಮಗಳು ಅಕ್ರಮ ಬಾರ್ ನಡೆಸುತ್ತಿದ್ದಾರೆ – ಕಾಂಗ್ರೆಸ್ ಆರೋಪ