ಅರಸೇನಾ ಪಡೆ ಗಡಿ ಭದ್ರತಾ ಪಡೆ (BSF) 1,312 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಿದೆ.
ಆದರೆ ರೇಡಿಯೋ ಆಪರೇಟರ್ (Radio Operator) ವಿಭಾಗದ ಹೆಡ್ಕಾನ್ಸ್ಸ್ಟೇಬಲ್ ಹುದ್ದೆಗಳ ಭರ್ತಿಯಲ್ಲಿ ಇತರೆ ಹಿಂದುಳಿದ ವರ್ಗಕ್ಕೆ ಒಂದೇ ಒಂದು ಹುದ್ದೆಯನ್ನೂ ಮೀಸಲಿಟ್ಟಿಲ್ಲ.
ರೇಡಿಯೋ ಆಪರೇಟರ್ ಹೆಡ್ ಕಾನ್ಸ್ಸ್ಟೇಬಲ್ ಹುದ್ದೆಯಲ್ಲಿ 420 ಸ್ಥಾನಗಳನ್ನು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ, ಎಸ್ಸಿ ಸಮುದಾಯಕ್ಕೆ 131, ಎಸ್ಟಿ ಸಮುದಾಯಕ್ಕೆ 110 ಹುದ್ದೆಗಳನ್ನು ಮೀಸಲಿರಿಸಿದೆ. ಮೀಸಲಿಡದ ಸ್ಥಾನಗಳು 321.
ಅಂದರೆ ಒಟ್ಟು 981 ಹುದ್ದೆಗಳ ಭರ್ತಿಯಲ್ಲಿ ಇತರೆ ಹಿಂದುಳಿದ ಸಮುದಾಯಕ್ಕೆ ಮೀಸಲಾತಿ ಅಡಿ ಹುದ್ದೆ ಕಾಣಿಸಿಲ್ಲ ಮತ್ತು ಎಸ್ಸಿ/ಎಸ್ಟಿ ಸಮುದಾಯಕ್ಕೆ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕಿಂತ ಕಡಿಮೆ ಹುದ್ದೆಗಳನ್ನು ತೋರಿಸಲಾಗಿದೆ.
ಬಿಎಸ್ಎಫ್ ಹೆಡ್ಕಾನ್ಸ್ಸ್ಟೇಬಲ್ ರೇಡಿಯೋ ಮೆಕಾನಿಕ್ (Radio Mechanic) ಹುದ್ದೆಗಳ ಒಟ್ಟು 330 ಹುದ್ದೆಗಳ ಭರ್ತಿಯಲ್ಲಿ 43 ಮೀಸಲಿರಿಸದ ಹುದ್ದೆಗಳು, ಒಬಿಸಿ -100, ಆರ್ಥಿಕವಾಗಿ ಹಿಂದುಳಿದ ವರ್ಗ -61, ಎಸ್ಸಿ-77, ಎಸ್ಟಿ – 49 ಹುದ್ದೆಗಳನ್ನು ಮೀಸಲಿರಿಸಲಾಗಿದೆ.
ಆಗಸ್ಟ್ 20ರಿಂದ ಶುರುವಾಗಿರುವ ಅರ್ಜಿ ಸಲ್ಲಿಕೆ (Online Application) ಸೆಪ್ಟೆಂಬರ್ 19ರವರೆಗೆ ಇರಲಿದೆ.
ವೇತನ: 25 ಸಾವಿರ ರೂ.ಗಳಿಂದ 81 ಸಾವಿರ ರೂಪಾಯಿ.
ಪರೀಕ್ಷಾ ದಿನಾಂಕ: (Written Test) ನವೆಂಬರ್ 22, 2022ರಂದು ಲಿಖಿತ ಪರೀಕ್ಷೆ ನಡೆಯಲಿದೆ. ಬಳಿಕ ಎರಡನೇ ಹಂತದಲ್ಲಿ ದಾಖಲೆಗಳ ಪರೀಶಿಲನೆ ಮತ್ತು ಮೂರನೇ ಹಂತದಲ್ಲಿ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ.
ವಿದ್ಯಾರ್ಹತೆ: (Education) ಎರಡೂ ಹುದ್ದೆಗಳಿಗೆ ಐಟಿಐ (ITI) ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದೆ ಅಥವಾ ಪಿಯುಸಿಯಲ್ಲಿ ವಿಜ್ಞಾನ ಶಿಕ್ಷಣ ಪಡೆದಿರಬೇಕು.
ವಯೋಮಿತಿ: (Age)
ಸಾಮಾನ್ಯ ವರ್ಗ: ಗರಿಷ್ಠ 25 ವರ್ಷ, ಇತರೆ ಹಿಂದುಳಿದ ವರ್ಗ: ಗರಿಷ್ಠ 28 ವರ್ಷ, ಎಸ್ಸಿ/ಎಸ್ಟಿ ಸಮುದಾಯ: 30 ವರ್ಷ.
ADVERTISEMENT
ADVERTISEMENT