ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ಸಂಚಾರ ನಿಗಮ ಲಿಮಿಟೆಡ್ (BSNL VRS) ಭಾರೀ ಪ್ರಮಾಣದಲ್ಲಿ ನೌಕರರನ್ನು ಕಡಿತಗೊಳಿಸುವ ಸಾಧ್ಯತೆ ಇದೆ.
ಬಿಎಸ್ಎನ್ಎಲ್ನ ಶೇಕಡಾ 30ರಷ್ಟು ನೌಕರರಿಗೆ ವಿಆರ್ಎಸ್ ಅಥವಾ ಸ್ವಯಂ ನಿವೃತ್ತಿ ನೀಡುವ ಸಾಧ್ಯತೆ ದಟ್ಟವಾಗಿದೆ. ಅಂದರೆ ಬಿಎಸ್ಎನ್ಎಲ್ನಲ್ಲಿ ಈಗಿರುವ ಒಟ್ಟು ನೌಕರರ ಪೈಕಿ ಶೇಕಡಾ 30ರಷ್ಟು ನೌಕರರನ್ನು ವಿಆರ್ಎಸ್ (BSNL VRS) ಮೂಲಕ ತೆಗೆದುಹಾಕಲಾಗುತ್ತದೆ.
ಬಿಎಸ್ಎನ್ಎಲ್ನಲ್ಲಿ ವಿಆರ್ಎಸ್ ಜಾರಿಗೊಳಿಸುವ ಸಲುವಾಗಿ ದೂರಸಂಪರ್ಕ ಇಲಾಖೆ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ವಿಅರ್ಎಸ್ ಜಾರಿಗಾಗಿ ದೂರಸಂಪರ್ಕ ಇಲಾಖೆ ಕೇಂದ್ರ ಹಣಕಾಸು ಸಚಿವಾಲಯಕ್ಕೆ 15 ಸಾವಿರ ಕೋಟಿ ರೂಪಾಯಿ ಮೊತ್ತದ ಅನುದಾನಕ್ಕಾಗಿ ಬೇಡಿಕೆ ಇಟ್ಟಿದೆ. ಒಂದು ವೇಳೆ ಆ ಪ್ರಸ್ತಾಪಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದರೆ ಆಗ ವಿಆರ್ಎಸ್ ಜಾರಿಯಾಗುವುದು ಖಂಡಿತ.
ಶೇಕಡಾ 30ರಷ್ಟು ನೌಕರರಿ ಕಡಿತ ಅಂದ್ರೆ ವಿಆರ್ಎಸ್ ಮೂಲಕ ಬಿಎಸ್ಎನ್ಎಲ್ನಲ್ಲಿರುವ 19 ಸಾವಿರದಷ್ಟು ನೌಕರರಿಗೆ ಸ್ವಯಂ ನಿವೃತ್ತಿ ನೀಡಲಾಗುತ್ತದೆ.
ಬಿಎಸ್ಎನ್ಎಲ್ ಅಂಕಿಅಂಶದ ಪ್ರಕಾರ ಈಗ 30 ಸಾವಿರದಷ್ಟು ಎಕ್ಸ್ಕ್ಯೂಟಿವ್ ಮತ್ತು 25 ಸಾವಿರದಷ್ಟು ನಾನ್ ಎಕ್ಸ್ಕ್ಯೂಟಿವ್ ನೌಕರರಿದ್ದಾರೆ.
2019ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಬಿಎಸ್ಎನ್ಎಲ್ಗೆ 69 ಸಾವಿರ ಕೋಟಿ ರೂಪಾಯಿಯಷ್ಟು ಹಣಕಾಸು ನೆರವನ್ನು ನೀಡಿತ್ತು. ಅದರಲ್ಲಿ 17,500 ಕೋಟಿ ರೂಪಾಯಿಯಷ್ಟು ಮೊತ್ತವನ್ನು ನೌಕರರ ವಿಆರ್ಎಸ್ಗಾಗಿ ಬಳಸಿಕೊಳ್ಳಲಾಗಿತ್ತು.
ವಿಆರ್ಎಸ್ ಆಗಲಿರುವ ನೌಕರರಿಗೆ ಪಿಂಚಣಿ, ಗ್ರ್ಯಾಚ್ಯುಟಿ ಸೇರಿದಂತೆ ನಿವೃತ್ತಿ ಸೌಲಭ್ಯಗಳನ್ನು ಏಕಕಾಲಕ್ಕೆ ಪಾವತಿಸಲಾಗುತ್ತದೆ.
ಈ ಹಣಕಾಸು ವರ್ಷದಲ್ಲಿ ಬಿಎಸ್ಎನ್ 21,302 ಕೋಟಿ ರೂಪಾಯಿಯಷ್ಟು ಆದಾಯವನ್ನು ಗಳಿಸಿದೆ. ಸದ್ಯಕ್ಕೆ ಬಿಎಸ್ಎನ್ಎಲ್ನ ಶೇಕಡಾ 38ರಷ್ಟು ಆದಾಯ ನೌಕರರ ಸಂಬಳಕ್ಕಾಗಿಯೇ ವಿನಿಯೋಗವಾಗುತ್ತಿದೆ. ಅಂದರೆ ವರ್ಷಕ್ಕೆ 7,500 ಕೋಟಿ ರೂಪಾಯಿಯಷ್ಟು ಮೊತ್ತವನ್ನು ಸಂಬಳಕ್ಕಾಗಿಯೇ ವ್ಯಯಿಸಲಾಗುತ್ತಿದೆ. ನೌಕರರ ಮೇಲಿನ ವೆಚ್ಚ ಕಡಿತದ ಮೂಲಕ ಬಿಎಸ್ಎನ್ಎಲ್ನ್ನು ಮತ್ತಷ್ಟು ಆರ್ಥಿಕವಾಗಿ ಸದೃಢಗೊಳಿಸುವುದು ದೂರಸಂಪರ್ಕ ಇಲಾಖೆ ಉದ್ದೇಶ.
ADVERTISEMENT
ADVERTISEMENT