ರಾಜಸ್ಥಾನದಲ್ಲಿ ಬಹುಜನ ಸಮಾಜ ಪಕ್ಷದ ಶಾಸಕರು ಕಾಂಗ್ರೆಸ್ನಲ್ಲಿ ವಿಲೀನಗೊಂಡಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಬಿಎಸ್ಪಿಯ ಆರು ಶಾಸಕರು ಮತ ಚಲಾಯಿಸಿದ್ದಾರೆ.
ರಾಜ್ಯಸ್ಥಾನದಲ್ಲಿ ಬಿಎಸ್ಪಿ 6 ಮಂದಿ ಶಾಸಕರನ್ನು ಹೊಂದಿದೆ.
ಮತದಾನಕ್ಕಾಗಿ ಬೆಳಗ್ಗೆ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸುರ್ಜೆವಾಲಾ ಅವರ ಜೊತೆಗೆ ಬಂದು ಬಿಎಸ್ಪಿ ಶಾಸಕರು ಮತದಾನ ಮಾಡಿದರು.
ರಾಜಸ್ಥಾನದಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಮೂವರು ಅಭ್ಯರ್ಥಿಗಳು, ಬಿಜೆಪಿ ಒಬ್ಬರು ಮತ್ತು ಬಿಜೆಪಿ ಬೆಂಬಲಿತ ಝೀ ಟಿವಿ ಮಾಲೀಕ ಸುಭಾಷ್ ಚಂದ್ರ ಕಣದಲ್ಲಿದ್ದಾರೆ.