ಕ್ರಿಮಿನಲ್ಸ್ ಮತ್ತು ಮಾಫಿಯಾ ಪಾಲಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಲ್ಡೋಜರ್ ಬಾಬಾ ಆಗಿ ಮಾರ್ಪಟ್ಟಿದ್ದರು. ಇದೀಗ ಮಧ್ಯಪ್ರದೇಶ ಮುಖ್ಯಮಂತ್ರಿ ಕೂಡಾ ಯೋಗಿ ಮಾದರಿ ಅನುಸರಿಸಲು ಮುಂದಾಗಿದ್ದಾರೆ.
ಮಧ್ಯಪ್ರದೇಶದ ಬಿಜೆಪಿ ಘಟಕ ಸಿಎಂ ಶಿವರಾಜ್ ಸಿಂಗ್ ಚೌಹಾನ್ ರನ್ನು ಬುಲ್ಡೋಜರ್ ಮಾಮ ಎಂದು ಕರೆದಿದೆ. ಕ್ರಿಮಿನಲ್ ಗಳನ್ನು ಎಚ್ಚರಿಸುತ್ತಾ ದೊಡ್ಡ ದೊಡ್ಡ ಹೋರ್ಡಿಂಗ್ ಹಾಕಿದೆ.
ಅಕ್ಕ ತಂಗಿ, ಮಗಳ ಗೌರವದ ಜೊತೆ ಆಟ ಆಡುವವರ ಮನೆಗೆ ಈಗ ಬುಲ್ಡೋಜರ್ ಬರಲಿವೆ. ಮಗಳ ಭದ್ರತೆಗೆ ಆತಂಕ ಎದುರಾದರೆ ಬುಲ್ಡೋಜರ್ ಒಂದು ಸುತ್ತಿಗೆಯಾಗಲಿದೆ ಎಂಬ ಸ್ಲೋಗನ್ ಗಳನ್ನು ಬರೆಸಲಾಗಿದೆ.
ಮಧ್ಯಪ್ರದೇಶದಲ್ಲಿರುವ ಗುಂಡಾಗಳು ಈ ವಿಚಾರವನ್ನು ಮನದಲ್ಲಿ ಇಟ್ಟುಕೊಳ್ಳಬೇಕು. ಬಡವರು, ಬಲಹೀನರ ಮೇಲೆ ದೌರ್ಜನ್ಯ ನಡೆಸಲು ಯತ್ನಿಸಿದರೆ, ನಿಮ್ಮ ಮನೆಗಳನ್ನು ನೆಲಸಮ ಮಾಡಲಾಗುವುದು ಎಂದು ಶಿವರಾಜ್ ಸಿಂಗ್ ಚೌಹಾನ್ ಎಚ್ಚರಿಕೆ ನೀಡಿದ್ದಾರೆ.