ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 110 ರನ್ಗೆ ಆಲೌಟ್ ಆಗಿದೆ.
50 ಓವರ್ಗಳ ಪಂದ್ಯದಲ್ಲಿ ಕೇವಲ 25.2 ಓವರ್ಗೆ ಇಂಗ್ಲೆಂಡ್ ಬ್ಯಾಟಿಂಗ್ ಪರಿಸಮಾಪ್ತಿ ಆಗಿದೆ.
19 ರನ್ಗೆ 6 ವಿಕೆಟ್ ಪಡೆಯುವ ಮೂಲಕ ಬೂಮ್ರಾ ಇಂಗ್ಲೆಂಡ್ನ ಬೆನ್ನುಮೂಳೆ ಮುರಿದರು.
ಮೊಹಮ್ಮದ್ ಶಮಿ 31 ರನ್ಗೆ 3 ವಿಕೆಟ್ ಪಡೆದರು.
ಇಂಗ್ಲೆಂಡ್ನ ನಾಲ್ಕು ಬ್ಯಾಟ್ಸ್ಮನ್ಗಳು ಡಕೌಟ್ ಆದರು.
ಜಾಸ್ ಬಟ್ಲರ್ 30 ರನ್ ಗಳಿಸಿದ್ದೇ ಇಂಗ್ಲೆಂಡ್ ಪರ ಅತೀ ಹೆಚ್ಚು ವೈಯಕ್ತಿಕ ಸ್ಕೋರ್.