ಸರ್ಕಾರದ ಟೆಂಡರ್ ಕೊಡಿಸುವುದಾಗಿ ಮಹಿಳೆ ಗ್ಯಾಂಗ್ ಒಂದು ಉದ್ಯಮಿ ಪುತ್ರನ ಕಿಡ್ನಾಪ್ ಮಾಡಿ ಬ್ಲ್ಯಾಕ್ ಮೇಲ್ ಮಾಡಿರುವ ಪ್ರಕರಣ ಬೆಂಗಳೂರಿನಲ್ಲಿ ವರದಿಯಾಗಿದೆ.
ಬೆಂಗಳೂರಿನ ಇಂಡಸ್ಟ್ರೀಯಲ್ ಸಪ್ಲೈ ಕಂಪನಿಯ ಉದ್ಯಮಿ ರವಿಯವರ ಪುತ್ರ ಸೂರಜ್ ಎನ್ನುವವರನ್ನು ಕಿಡ್ನಾಪ್ ಮಾಡಲಾಗಿದ್ದು, ಸೂರಜ್ಗೆ ಗನ್ ತೋರಿಸಿ ಖತರ್ನಾಕ್ ಲೇಡಿ ಡಾನ್ ಒಳಗೊಂಡಂತೆ ಮೂವರು ಬ್ಲ್ಯಾಕ್ ಮೇಲ್ ಮಾಡಿದ್ದಾರೆ.
ಘಟನೆ ನಡೆದಿದ್ದು ಹೇಗೆ..?
ಶ್ರೀ ಅಬ್ದುಲ್ ಕಲಾಂ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷೆಯಾಗಿರುವ ಪುಷ್ಪಲತಾ, ಸರ್ಕಾರದ ಟೆಂಡರ್ ಕೊಡುಸ್ತಿನಿ ಎಂದು ಸೂರಜ್ರನ್ನು ನಾಲ್ಕೈದು ಬಾರಿ ಭೇಟಿಯಾಗಿದ್ದರು.
ಪುಷ್ಪಲತಾ ಟೆಂಡರ್ ಬಗೆಗಿನ ಮಾತುಕತೆಗಾಗಿ ಸೂರಜ್ರನ್ನು ಕರೆದಿದ್ದರು. ಭೇಟಿಯ ವೇಳೆ ಐಎಎಸ್ ಅಧಿಕಾರಿಯ ಪಿಎ ಎಂದು ಸಂತೋಷ್ ರನ್ನು ಪರಿಚಯಿಸಿದ್ದರು. ಮತ್ತಿಬ್ಬರು ಇದೇ ವೇಳೆ ನುಗ್ಗಿದ್ದರು.
ಇದನ್ನೂ ಓದಿ : ಸುಲಿಗೆ ಬ್ಲಾಕ್ಮೇಲ್ ಆರೋಪ : ಖಾಸಗಿ ಸುದ್ದಿ ವಾಹಿನಿ ಮುಖ್ಯಸ್ಥನ ಬಂಧನ
ಈ ವೇಳೆ ಪುಷ್ಪಲತಾ ಸೂರಜ್ಗೆ 4 ಕೋಟಿ ಹಣ ಕೊಡದಿದ್ದರೆ ರೇಪ್ ಮಾಡಿದ್ಯಾ ಎಂದು ಕೇಸ್ ದಾಖಲಿಸುತ್ತೇವೆ ಎಂಬ ಬೆದರಿಕೆ ಹಾಕಿದ್ದಾರೆ. ನನ್ನ ಬಳಿ ಅಷ್ಟು ದುಡ್ಡಿಲ್ಲ ,ಮನೆ ಮಾರಿದರೂ ಅಷ್ಟು ದುಡ್ಡು ಸಿಗಲ್ಲ , ಬಿಟ್ಟು ಬಿಡಿ ಎಂದಿದ್ದ ಸೂರಜ್. ನಂತರ ತನ್ನ ಸ್ನೇಹಿತ ಗುರುಮೂರ್ತಿಗೆ ಹೇಳಿ ಐದು ಗಂಟೆಯ ವೇಳೆ 25 ಲಕ್ಷ ತರುವಂತೆ ಹೇಳಿದ್ದ. ಅಬ್ದುಲ್ ಕಲಾಂ ಚಾರಿಟೇಬಲ್ ಟ್ರಸ್ಟ್ ಬಳಿ 25 ಲಕ್ಷ ಹಣ ತಂದಿದ್ದ ಗುರುಮೂರ್ತಿ ಸೂರಜ್ ಇಲ್ಲದ ಕಾರಣ ಪುಷ್ಪಾಳ ಕಡೆಯವರಿಗೆ ಹಣ ನೀಡದೆ ವಾಪಾಸಾಗಿದ್ದ. ಹೊರಗೆ ಹೇಳಿದರೆ ರೇಪ್ ಕೇಸ್ ಹಾಕುವುದಲ್ಲದೆ ಇಡೀ ಕುಟುಂಬವನ್ನ ಹತ್ಯೆ ಮಾಡುತ್ತೆನೆಂದು ಲೇಡಿ ಡಾನ್ ಪುಷ್ಪಲತಾ ಬೆದರಿಕೆ ಹಾಕಿದ್ದಾರೆ ಎಂದು ಸೂರಜ್ ಹೇಳಿದ್ದಾರೆ.
ಆರೋಪಿಗಳ ಬಂಧನ
ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪುಷ್ಪಲತಾ, ಅರ್ಜುನ್ , ರಾಕೇಶ್ ಹಾಗು ಸಂತೋಷ್ ರ ಮೇಲೆ ಉದ್ಯಮಿ ರವಿ ದೂರು ನೀಡಿದ್ದಾರೆ. ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ : ರಾಮಚಂದ್ರಾಪುರ ಮಠ ಬ್ಲ್ಯಾಕ್ಮೇಲ್ ಪ್ರಕರಣ: ಆರೋಪ ವಜಾ ಮಾಡುವಂತೆ ಸಲ್ಲಿಸಿದ್ದ ಅರ್ಜಿ ತಿರಸ್ಕಾರ