ಮಹಾರಾಷ್ಟ್ರದ ಲಕ್ಷ್ಮೀ ಕೋ ಅಪರೇಟಿವ್ ಬ್ಯಾಂಕ್ನ (Laxmi Co Operative Bank) ಪರವಾನಗಿಯನ್ನು ರದ್ದು ಮಾಡಿ ಇಂದು ಗುರುವಾರ ಭಾರತೀಯ ರಿಸರ್ವ್ ಬ್ಯಾಂಕ್(RBI) ಆದೇಶ ಹೊರಡಿಸಿದೆ. ಸೋಲಾಪುರ ಮೂಲದ ಈ ಬ್ಯಾಂಕ್ಗೆ ಸಾಕಷ್ಟು ಬಂಡವಾಳ ಮತ್ತು ಗಳಿಕೆಯ ನಿರೀಕ್ಷೆ ಇಲ್ಲ. ನಿಯಮಗಳಿಗೂ ಬದ್ಧವಾಗಿಲ್ಲ ಎಂದು ಆರ್ಬಿಐ ತಿಳಿಸಿದೆ.
ಆರ್ಬಿಐ ಆದೇಶ ಇಂದಿನಿಂದಲೇ ಜಾರಿಗೆ ಬರಲಿದೆ.
ಬ್ಯಾಂಕ್ನ ಪರವಾನಗಿ ರದ್ದು ಮಾಡಿ ಆದೇಶ ಹೊರಡಿಸಿರುವ ಆರ್ಬಿಐ, ಮಹಾರಾಷ್ಟ್ರದ ಸೋಲಾಪುರದಲ್ಲಿ ಲಕ್ಷ್ಮೀ ಕೋ ಅಪರೇಟಿವ್ ಬ್ಯಾಂಕ್ (Laxmi Co Operative Bank) ಇಂದಿನಿಂದ ಬ್ಯಾಂಕಿಂಗ್ ವ್ಯವಹಾರಗಳಾದ ಠೇವಣಿ ಸ್ವೀಕಾರ ಮತ್ತು ಠೇವಣಿಗಳ ಮರುಪಾವತಿ ಮಾಡುವಂತಿಲ್ಲ ಎಂದು ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.
ಈ ಬಗ್ಗೆ ಮಹಾರಾಷ್ಟ್ರದ ಸಹಕಾರಿ ಸಂಘದ ಆಯುಕ್ತರಿಗೆ ನಿರ್ದೇಶಿಸಿರುವ ಆರ್ಬಿಐ, ಈ ಬ್ಯಾಂಕನ್ನು ಮುಚ್ಚಲು ಮತ್ತು ಬ್ಯಾಂಕಿಗೆ ಒಬ್ಬ ಲಿಕ್ವಿಡೇಟರ್ (ಮಧ್ಯವರ್ತಿ)ನನ್ನು ನೇಮಕ ಮಾಡಲು ತಿಳಿಸಿದೆ.
ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC) ಅಡಿಯಲ್ಲಿ ಪ್ರತಿ ಠೇವಣಿದಾರರು 5 ಲಕ್ಷಗಳ ವರೆಗಿನ ಠೇವಣಿಯನ್ನು ಪಡೆಯಲು ಅರ್ಹರಾಗಿರುತ್ತಾರೆ.
ಬ್ಯಾಂಕ್ ನೀಡಿರುವ ಮಾಹಿತಿ ಪ್ರಕಾರ ಶೇ.99 ಪ್ರತಿಶತದಷ್ಟು ಠೇವಣಿದಾರರು ಮರಳಿ ತಮ್ಮ ಹಣ ಪಡೆಯುತ್ತಾರೆ ಎಂದು ಆರ್ಬಿಐ ಹೇಳಿದೆ. ಇದನ್ನೂ ಓದಿ : RBI ಹೆಸರೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಬೇಡಿ… ವ್ಯಾಪಾರಿ ಬುದ್ದಿ ಬೇಡ… ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಸುಪ್ರೀಂಕೋರ್ಟ್