ಧಾರ್ಮಿಕ ಕಾರ್ಯಕ್ರಮದಲ್ಲಿ ಹನುಮನ ವೇಷಧಾರಿಯೊಬ್ಬರು ವೇದಿಕೆಯಲ್ಲೇ ಕುಸಿದು ಸಾವನ್ನಪ್ಪಿದ್ದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಉತ್ತರಪ್ರದೇಶ (Uttarprdesh) ರಾಜ್ಯದ ಮೈನ್ಪುರಿ (Mainpuri) ಜಿಲ್ಲೆಯಲ್ಲಿ ಹನುಮನ ಪಾತ್ರಧಾರಿಯೊಬ್ಬರು ಭಕ್ತಿಗೀತೆಗೆ ಕುಣಿಯುತ್ತಿದ್ದರು.
ಕೆಲ ಹೊತ್ತು ಹೆಜ್ಜೆ ಹಾಕಿದ ಬಳಿಕ ಸುಸ್ತಾಗಿ ವೇದಿಕೆಯ ಒಂದು ಭಾಗದಲ್ಲಿ ಕುಳಿತಿದ್ದ ಪುಟಾಣಿ ಮಕ್ಕಳ ಸಾಲಿನ ಬಳಿ ಬಂದು ಕುಸಿದು ಮಲಗಿದರು.
ಹನುಮ ವೇಷಧಾರಿ ಮಲಗಿದ್ದನ್ನು ನೋಡಿ ಕೆಲ ಹೊತ್ತು ಅಲ್ಲಿದ್ದವರೂ ಸುಮ್ಮನಿದ್ದರು.
ಆದರೆ ಬಳಿಕ ಬಂದು ಅವರನ್ನು ಎಬ್ಬಿಸಿದಾಗ ಅವರ ಪ್ರಾಣಪಕ್ಷಿ ಹಾರಿ ಹೋಗಿತು.
35 ವರ್ಷದ ಹನುಮನ ವೇಷಧಾರಿ ಹೃದಯಾಘಾತದಿಂದ (Cardiac Arrest) ಪ್ರಾಣ ಕಳೆದುಕೊಂಡರು.