ಕೊಡಗಿನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ( Siddaramaiah ) ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಮತ್ತೊಂದು ತಿರುವು ದೊರಕಿದೆ. ಮೊಟ್ಟೆ ಎಸೆದಿದ್ದ ಆರೋಪಿ ಸಂಪತ್ನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಆರೋಪಿ ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾನೆ.
ಕೋರ್ಟ್ಗೆ ಶರಣಾಗಲು ಬಂದಾಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಆರೋಪಿ ಸಂಪತ್ ತಾನು ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾನೆ.
ಇದನ್ನೂ ಓದಿ : ಸಿದ್ದರಾಮಯ್ಯ ರಾಷ್ಟ್ರರಾಜಕಾರಕ್ಕೆ ಹೋಗಲಿ – ಜೆಡಿಎಸ್ ಶಾಸಕ ಸಾರಾ ಮಹೇಶ್
ಅಲ್ಲದೇ, ಸಿದ್ದರಾಮಯ್ಯ ( Siddaramaiah ) ನವರ ಕಾರಿಗೆ ಮೊಟ್ಟೆ ಎಸೆದಿದ್ದು ನಾನೇ. ಸಿದ್ದರಾಮಯ್ಯನವರ ಕೆಲವು ಹೇಳಿಕೆಗಳಿಂದ ಬೇಸತ್ತು ಹೀಗೆ ಮಾಡಿದ್ದೇನೆ ಎಂದಿದ್ದಾನೆ.
ಸಿದ್ದರಾಮಯ್ಯ ( Siddaramaiah ) ದನದ ಮಾಂಸ ಭಕ್ಷಣೆ ಮಾಡುತ್ತೇನೆ ಎಂದಿದ್ರು. ಟಿಪ್ಪು ವಿಷಯದಲ್ಲಿ ಕೊಡಗಿನ ಜನರ ಭಾವನೆಗೆ ಧಕ್ಕೆ ತಂದಿದ್ದರು. ಸಿದ್ದರಾಮಯ್ಯನವರ ಈ ನಡೆ ನನಗೆ ಇಷ್ಟವಾಗಲಿಲ್ಲ. ಆದ್ದರಿಂದ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದೇನೆ ಎಂದು ಆರೋಪಿ ಸಂಪತ್ ಹೇಳಿದ್ದಾನೆ ಎನ್ನಲಾಗಿದೆ.