ADVERTISEMENT
ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹಗರಣ ಮತ್ತು ಅಕ್ರಮಗಳ ಆರೋಪದೊಂದಿಗೆ ಮುಗಿಬಿದ್ದಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರೇ ಹಲವು ಭ್ರಷ್ಟಾಚಾರದ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ಕುಮಾರಸ್ವಾಮಿ ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ, ಗಣಿ ಮತ್ತು ಖನಿಜ ಅಭಿವೃದ್ಧಿ ಕಾಯ್ದೆ, ಕರ್ನಾಟಕ ಅರಣ್ಯ ಕಾಯ್ದೆ, ಕರ್ನಾಟಕ ಭೂ ಮಿತಿ ಮತ್ತು ವರ್ಗಾವಣೆ ಕಾಯ್ದೆಯಲ್ಲಿ ಪ್ರಕರಣಗಳು ದಾಖಲಾಗಿವೆ.
ಕುಮಾರಸ್ವಾಮಿ ಅವರ ವಿರುದ್ಧ ಪ್ರಕರಣಗಳ ಸ್ವರೂಪ:
– ಮೋಸ ಮಾಡುವ ಸಲುವಾಗಿ ಪೋರ್ಜರಿ ಮಾಡಿದ ಆರೋಪದಡಿಯಲ್ಲಿ ಐಪಿಸಿ ಕಲಂ 468ರಡಿಯಲ್ಲಿ ಮೂರು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
– ಆಸ್ತಿ ವಿಷಯದಲ್ಲಿ ಅಪ್ರಾಮಾಣಿಕತೆ ಮತ್ತು ಮೋಸಕ್ಕೆ ಸಂಬಂಧಿಸಿದಂತೆ ಆರೋಪದಡಿ ಐಪಿಸಿ ಕಲಂ 420 ಅಡಿಯಲ್ಲಿ 3 ಪ್ರಕರಣ ಎದುರಿಸುತ್ತಿದ್ದಾರೆ.
– ನಂಬಿಕೆ ದ್ರೋಹ ಸಂಬಂಧ ಐಪಿಸಿ ಕಲಂ 406ರಡಿಯಲ್ಲಿ 2 ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
– ಅಪರಾಧಗಳನ್ನು ಎಸಗಲು ಯತ್ನಿಸಿದ ಆರೋಪದಡಿಯಲ್ಲಿ ಐಪಿಸಿ ಕಲಂ 511ರ ಅಡಿಯಲ್ಲಿ 1 ಪ್ರಕರಣ ದಾಖಲಾಗಿದೆ.
– ಸಾರ್ವಜನಿಕ ಹುದ್ದೆಯಲ್ಲಿರುವ ವ್ಯಕ್ತಿಯಿಂದ ಆಗಿರುವ ನಂಬಿಕೆ ದ್ರೋಹ ಸಂಬಂಧ ಐಪಿಸಿ ಕಲಂ 511ರ ಅಡಿಯಲ್ಲಿ 1 ಪ್ರಕರಣ ದಾಖಲಾಗಿದೆ.
– ನಂಬಿಕೆ ದ್ರೋಹ ಸಂಬಂಧ ಐಪಿಸಿ ಕಲಂ 511ರಡಿಯಲ್ಲಿ 1 ಪ್ರಕರಣ ದಾಖಲಾಗಿದೆ.
– ನಂಬಿಕೆ ದ್ರೋಹ ಪ್ರಕರಣ ಸಂಬಂಧ ಐಪಿಸಿ ಕಲಂ 405ರಡಿಯಲ್ಲಿ 1 ಪ್ರಕರಣ ದಾಖಲಾಗಿದೆ.
– ಸಾರ್ವಜನಿಕ ಹುದ್ದೆಯಲ್ಲಿರುವ ವ್ಯಕ್ತಿಯಿಂದ ಆಗುವ ನಂಬಿಕೆ ದ್ರೋಹ ಸಂಬಂಧ ಐಪಿಸಿ ಕಲಂ 409ರಡಿಯಲ್ಲಿ 1 ಪ್ರಕರಣ ದಾಖಲಾಗಿದೆ.
– ಫೋರ್ಜರಿ ಕುರಿತ ಶಿಕ್ಷೆ ಸಂಬಂಧ ಐಪಿಸಿ ಕಲಂ 120ಬಿ ಅಡಿಯಲ್ಲಿ ನಾಲ್ಕು ಪ್ರಕರಣ ದಾಖಲಾಗಿದೆ.
– ಫೋರ್ಜರಿ ಸಂಬಂಧ ಐಪಿಸಿ ಕಲಂ 463ರಡಿಯಲ್ಲಿ 2 ಆರೋಪಗಳಿವೆ.
– ಪೋರ್ಜರಿ ಮಾಡಲಾದ ದಾಖಲೆಯನ್ನು ಅಸಲಿ ಎಂದು ನಂಬಿಸಿದ ಸಂಬಂಧ ಐಪಿಸಿ ಕಲಂ 471ರಡಿಯಲ್ಲಿ 2 ಆರೋಪಗಳಿವೆ.
– ಉದ್ದೇಶಪೂರ್ವಕವಾಗಿ ಮಾಹಿತಿ ಇದ್ದೇ ವಂಚನೆ ಮೂಲಕ ಯಾರ ಹಿತಾಸಕ್ತಿಯನ್ನು ರಕ್ಷಣೆ ಮಾಡಬೇಕಿತ್ತೋ ಅವರಿಗೆ ನಷ್ಟ ಉಂಟು ಮಾಡಿರುವ ಸಂಬಂಧ ಐಪಿಸಿ ಕಲಂ 418ರಡಿಯಲ್ಲಿ 1 ಆರೋಪವಿದೆ.
– ಸಾಕ್ಷ್ಯ ಸಲ್ಲಿಕೆ ಮಾಡದಂತೆ ಆ ಸಾಕ್ಷ್ಯವನ್ನು ನಾಶ ಮಾಡಿದ್ದರ ಸಂಬಂಧ ಐಪಿಸಿ ಕಲಂ 204ರಡಿಯಲ್ಲಿ 1 ಆರೋಪವಿದೆ.
– ಕರಾರು ಪತ್ರದಲ್ಲಿನ ಅಪ್ರಾಮಾಣಿಕತೆ ಮತ್ತು ಭ್ರಷ್ಟತೆ ಸಂಬಂಧ ಐಪಿಸಿ ಕಲಂ 423ರಡಿಯಲ್ಲಿ 1 ಆರೋಪವಿದೆ.
ಕುಮಾರಸ್ವಾಮಿ ವಿಚಾರಣೆ ಎದುರಿಸುತ್ತಿರುವ ಭ್ರಷ್ಟಾಚಾರದ ಪ್ರಕರಣಗಳು:
ಪ್ರಕರಣ ಸಂಖ್ಯೆ: 47/2012. ಈ ಪ್ರಕರಣದಲ್ಲಿ ಕುಮಾರಸ್ವಾಮಿ ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಕಲಂ 13(1)(ಸಿ), 13(1)(ಡಿ), 13(2)ರಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಗಳೂರಿನ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಪ್ರಕರಣ ಸಂಖ್ಯೆ: ಪಿಸಿಆರ್ 27/2011 (ಕ್ರೈಮ್ ನಂ.63/2011). ಈ ಪ್ರಕರಣದಲ್ಲಿ ಕುಮಾರಸ್ವಾಮಿ ಅವರ ವಿರುದ್ಧ ಐಪಿಸಿ ಕಲಂ 204, 405, 406,463,465,468,471,423 ಮತ್ತು 120ಬಿಗಳನ್ನು ಅನ್ವಯಿಸಲಾಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಕಲಂ 13(1)(ಡಿ)(ಇ), ಗಣಿ ಮತ್ತು ಖನಿಜ ಅಭಿವೃದ್ಧಿ ಕಾಯ್ದೆಯ ಕಲಂ 21, 23, ಶ್ರೀ41), 4(1ಎ) ಮತ್ತು ಕರ್ನಾಟಕ ಅರಣ್ಯ ಕಾಯ್ದೆಯ ಕಲಂ 104(ಸಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ವಿಚಾರಣೆ ಕೂಡಾ ಬೆಂಗಳೂರಿನ ನ್ಯಾಯಾಲಯದಲ್ಲಿ ನಡೆಯುತ್ತಿದೆ.
ಅಪರಾಧ ಸಂಖ್ಯೆ 16/2014: ಈ ಪ್ರಕರಣದಲ್ಲಿ ಐಪಿಸಿ ಕಲಂಗಳಾದ 420, 465, 467,468,120ಬಿ, 511 ಕಲಂಗಳನ್ನು ಅನ್ವಯಿಸಲಾಗಿದೆ. ಭ್ರಷ್ಟಾಚಾರ ತಡೆ ಕಾಯ್ದೆಯ ಕಲಂ 13(1), 13(1)(ಡಿ) ಮತ್ತು ಗಣಿ ಮತ್ತು ಖನಿಜ ಅಭಿವೃದ್ಧಿ ಕಾಯ್ದೆ ಕಲಂ 21(2) ಮತ್ತು 23ರಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ವಿಚಾರಣೆಯೂ ಬೆಂಗಳೂರಿನ ನ್ಯಾಯಾಲಯದಲ್ಲಿ ನಡೆಯುತ್ತಿದೆ.
ಪಿಸಿಆರ್ ಸಂಖ್ಯೆ: 9/2012(ಅಪರಾಧ ಸಂಖ್ಯೆ 60/2012): ಭ್ರಷ್ಟಾಚಾರ ತಡೆ ಕಾಯ್ದೆಯ ಕಲಂ 13(1)(ಸಿ), 13(1)(ಡಿ), 13(2) ಮತ್ತು ಕರ್ನಾಟಕ ಭೂ ಮಿತಿ ಮತ್ತು ವರ್ಗಾವಣೆ ಕಾಯ್ದೆಯ ಕಲಂ 3 ಮತ್ತು 4ರಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಐಪಿಸಿ ಕಲಂ 406,420, 463,465,468,471 ಕಲಂಗಳನ್ನೂ ಅನ್ವಯಿಸಲಾಗಿದೆ. ಈ ಪ್ರಕರಣದ ವಿಚಾರಣೆಯೂ ಬೆಂಗಳೂರಿನ ನ್ಯಾಯಾಲಯದಲ್ಲಿ ನಡೆಯುತ್ತಿದೆ.
ಅಪರಾಧ ಸಂಖ್ಯೆ: 27/2015: ಭ್ರಷ್ಟಾಚಾರ ತಡೆ ಕಾಯ್ದೆಯ ಕಲಂ 13(1), (13)(1)(ಸಿ), 13(1)(ಡಿ),13(2) ಮತ್ತು ಕರ್ನಾಟಕ ಭೂ ಮಿತಿ ಮತ್ತು ವರ್ಗಾವಣೆ ಕಾಯ್ದೆಯ ಕಲಂ 4 ಮತ್ತು 3ರಡಿಯಲ್ಲಿ ಪ್ರಕರಣ ನಡೆಯುತ್ತಿದೆ. ಐಪಿಸಿ ಕಲಂಗಳಾದ 409, 418,420,120ಬಿ, 34 ಅಡಿಯಲ್ಲಿ ಕುಮಾರಸ್ವಾಮಿ ಅವರ ವಿರುದ್ಧ ಬೆಂಗಳೂರಿನ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಮ್ಮ ವಿರುದ್ಧದ ಪ್ರಕರಣಗಳ ಮತ್ತು ಆ ಪ್ರಕರಣಗಳ ವಿಚಾರಣಾ ಹಂತದ ಬಗ್ಗೆ ಮಾಜಿ ಸಿಎಂ ಹೆಚ್ಡಿಕೆ ಅವರು ಮಾಹಿತಿ ನೀಡಿದ್ದಾರೆ.
ADVERTISEMENT