ADVERTISEMENT
ಇಸ್ಲಾಂ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡಲಾದ ಆರೋಪ ಸಂಬಂಧ ಕೇಂದ್ರೀಯ ತನಿಖಾ ದಳ (CBI) ಎಫ್ಐಆರ್ ದಾಖಲಿಸಿದೆ.
ಕಲ್ಕತ್ತಾ ಹೈಕೋರ್ಟ್ ಆದೇಶದ ಮೇರೆ ಸಿಬಿಐ ಎಫ್ಐಆರ್ ದಾಖಲಿಸಿದೆ. ಏಳು ಮಂದಿಯನ್ನು ಎಫ್ಐಆರ್ನಲ್ಲಿ ಆರೋಪಿಗಳೆಂದು ಪರಿಗಣಿಸಲಾಗಿದೆ.
2021ರ ಮೇನಲ್ಲಿ ನಡೆದಿದ್ದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಬಳಿಕ ನವೆಂಬರ್ 24, 2021ರಲ್ಲಿ ಇಬ್ಬರು ವ್ಯಕ್ತಿಗಳು ಕಾಣೆಯಾಗಿದ್ದರು. ಚುನಾವಣೆ ವೇಳೆ ಎದುರಾಳಿ ಪಕ್ಷಕ್ಕೆ ಬೆಂಬಲಿಸಿದರು ಎಂಬ ಕಾರಣಕ್ಕೆ ಅವರಿಬ್ಬರನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಕ್ರಮಕೈಗೊಂಡಿಲ್ಲ. ಬೆದರಿಕೆ ಅಥವಾ ಮಾದಕ ದ್ರವ್ಯ ಬಳಸಿ ಮತಾಂತರ ಮಾಡಲಾಗಿದೆ ಎಂದು ಆ ಇಬ್ಬರು ವ್ಯಕ್ತಿಗಳ ಪತ್ನಿಯರು ದೂರಿದ್ದರು.
2021ರ ಡಿಸೆಂಬರ್ನಲ್ಲಿ ದೂರು ನೀಡಿದ್ದರೂ ಪೊಲೀಸರು ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಮಾಲ್ಡಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧವೂ ಸಿಬಿಐ ತನಿಖೆ ಆರಂಭಿಸಿದೆ.
ಖುರ್ಷಿದ್ ಶೇಖ್, ನಾಝು ಶೇಖ್, ಬರ್ಕಟ್ಟಿ ಶೇಖ್ ಹಬೀಬ್ ಶೇಖ್., ರಬಿವುಲ್ ಶೇಖ್, ಮುಕ್ತಾದುಲ್ ಶೇಖ್, ತಿಂಕು ಶೇಖ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.
ADVERTISEMENT