ದೆಹಲಿಯಲ್ಲಿ ಅಬಕಾರಿ ಪರವಾನಿಗೆ ಸಂಬಂಧ ಸಿಬಿಐ (CBI) ಇವತ್ತು ಬೆಳಗ್ಗೆ ಆಮ್ ಆದ್ಮಿ ಪಕ್ಷದ (AAM ADMI PARTY) ಸರ್ಕಾರದ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಮನೆ ಮೇಲೆ ದಾಳಿ ನಡೆಸಿದೆ.
ದೆಹಲಿ ಸೇರಿದಂತೆ 20 ಕಡೆಗಳಲ್ಲಿ ಸಿಬಿಐ ದಾಳಿ ಶೋಧ ಕೈಗೊಂಡಿದೆ.
ಕಳೆದ ವರ್ಷ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಸರ್ಕಾರ ಹೊಸ ಅಬಕಾರಿ ನೀತಿಯನ್ನು ಜಾರಿಗೊಳಿಸಿತ್ತು.
ಆದರೆ ಹೊಸ ಅಬಕಾರಿ ನೀತಿಯಿಂದ ದೆಹಲಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಆಗಿದೆ ಎಂದು ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಅವರು ಅಭಿಪ್ರಾಯಪಟ್ಟ ಬಳಿಕ ದೆಹಲಿ ಸರ್ಕಾರ ಆ ಅಬಕಾರಿ ನೀತಿಯನ್ನು ಹಿಂಪಡೆದಿತ್ತು.
ಅಬಕಾರಿ ನೀತಿಯಲ್ಲಿನ ಅಕ್ರಮ ಸಂಬಂಧ ಸಿಬಿಐ ಎಫ್ಐಆರ್ (FIR) ದಾಖಲಿಸಿಕೊಂಡಿತ್ತು.
ಸಿಬಿಐ ದಾಳಿಯನ್ನು ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಸ್ವಾಗತಿಸಿದ್ದಾರೆ.
ನಾವು ಸಿಬಿಐನ್ನು ಸ್ವಾಗತಿಸುತ್ತೇವೆ. ಸಿಬಿಐ ತನಿಖೆಗೆ ಪೂರ್ಣ ಸಹಕಾರ ನೀಡುತ್ತೇವೆ ಮತ್ತು ಶೀಘ್ರವೇ ಸತ್ಯ ಹೊರಬರಲಿದೆ. ಇದುವರೆಗೆ ನನ್ನ ಮೇಲೆ ಹಲವು ಕೇಸ್ ಹಾಕಲಾಗಿದೆಯಾದರೂ ಏನೂ ಸಿಕ್ಕಿಲ್ಲ. ಈ ಕೇಸಿನಲ್ಲೂ ಏನೂ ಸಿಗಲ್ಲ. ದೇಶದಲ್ಲಿ ಉತ್ತಮ ಶಿಕ್ಷಣಕ್ಕಾಗಿ ನನ್ನ ಕೆಲಸವನ್ನು ನಿಲ್ಲಿಸಲು ಸಾಧ್ಯವಿಲ್ಲ
ಎಂದು ಮನೀಶ್ ಸಿಸೋಡಿಯಾ ಟ್ವೀಟಿಸಿದ್ದಾರೆ.
ADVERTISEMENT
ADVERTISEMENT