ADVERTISEMENT
ವಿದೇಶದಿಂದ ಚಿನ್ನ (Gold) ಮತ್ತು ಚಿನ್ನದ ಆಭರಣಗಳ ಆಮದಿನ (Import) ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ.
ಅಂದರೆ ವಿದೇಶದಿಂದ ಚಿನ್ನ ಮತ್ತು ಚಿನ್ನದ ಆಭರಣಗಳನ್ನು ಆಮದು ಮಾಡಿಕೊಳ್ಳಬೇಕಾದರೆ ಕೇಂದ್ರ ಸರ್ಕಾರದಿಂದ ಪೂರ್ವಾನುಮತಿ ಪಡೆದುಕೊಳ್ಳುವುದು ಕಡ್ಡಾಯ.
ಆದರೆ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಜೊತೆಗೆ ಭಾರತ ಮುಕ್ತ ವ್ಯಾಪಾರ ಒಪ್ಪಂದವನ್ನು ಹೊಂದಿರುವ ಹಿನ್ನೆಲೆಯಲ್ಲಿ UAEನಿಂದ ಚಿನ್ನ ಮತ್ತು ಚಿನ್ನದ ಆಭರಣ ಆಮದು ಮಾಡಿಕೊಳ್ಳಲು ಯಾವುದೇ ನಿರ್ಬಂಧ ಇಲ್ಲ.
ಏಪ್ರಿಲ್-ಮೇ ಅವಧಿಯಲ್ಲಿ ಚಿನ್ನದ ಆಮದು ಶೇಕಡಾ 40ರಷ್ಟು ಅಂದರೆ 4.7 ಬಿಲಿಯನ್ ಅಮೆರಿಕನ್ ಡಾಲರ್ಗೆ ಇಳಿಕೆಯಾಗಿತ್ತು.
ದೇಶದ ಮೇಲೆ ಆಮದಿನ ಭಾರವನ್ನು ತಗ್ಗಿಸುವ ಸಲುವಾಗಿ ಕೇಂದ್ರ ಸರ್ಕಾರ ಚಿನ್ನ ಮತ್ತು ಚಿನ್ನಾಭರಣಗಳ ಆಮದಿನ ಮೇಲೆ ನಿರ್ಬಂಧ ಹೇರಿದೆ.
ADVERTISEMENT