ಬಿಜೆಪಿ ಟೀಕಿಸುವ ಭರದಲ್ಲಿ ಪುನೀತ್ ರಾಜ್ಕುಮಾರ್ ಸಾವಿನ ಬಗ್ಗೆ ಪ್ರಸ್ತಾಪಿಸಿ ಸಿಎಂ ಬೊಮ್ಮಾಯಿಯರನ್ನು ಟೀಕಿಸಿದ್ದ ಚಕ್ರವರ್ತಿ ಸೂಲಿಬೆಲೆ ಅಪ್ಪು ಅವರ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.
ಸಿನಿಮಾ ನಟರೊಬ್ಬರ ಸಾವಿನ ವೇಳೆ ಸಿಎಂ ಮೂರು ದಿನ ಪಾಲ್ಗೊಂಡಿದ್ದರು. ಆದರೆ ಶಾಸಕರ ಕಡತಗಳಿಗೆ ಸಹಿ ಹಾಕಲು ಸಿಎಂ ಬೊಮ್ಮಾಯಿ ಅವರಿಗೆ ಸಮಯ ಇಲ್ಲ ಎಂದು ಚಕ್ರವರ್ತಿ ಸೂಲಿಬೆಲೆ ಟ್ವೀಟಿಸಿದ್ದರು.
ಈ ಮೂಲಕ ಅಪ್ಪು ಅವರ ಅಗಲಿಕೆಯ ಬಳಿಕ ಅಂತ್ಯಕ್ರಿಯೆ ಮುಗಿಯುವರೆಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಖುದ್ದು ನಿಗಾ ವಹಿಸಿ ವ್ಯವಸ್ಥೆಗಳನ್ನು ಮಾಡಿಸಿದ್ದರು.
ಈ ಬಗ್ಗೆ ತಾವು ಮಾಡಿದ್ದ ಸರಣಿ ಟ್ವೀಟ್ನಲ್ಲಿ ಚಕ್ರವರ್ತಿ ಸೂಲಿಬೆಲೆ ಉಲ್ಲೇಖಿಸಿದ್ದರು.
ಕನ್ನಡ ಸಿನಿಮಾ ಪ್ರೇಕ್ಷಕರ ಆಕ್ರೋಶ ಹೊರಬೀಳ್ತಿದ್ದಂತೆ ಸೂಲಿಬೆಲೆ ಕ್ಷಮೆಯಾಚಿಸಿದ್ದಾರೆ.
ಈ ಟ್ವೀಟ್ ಪುನೀತ್ ಅವರನ್ನು ಅಗೌರವಿಸಿದ್ದು ಎಂದು ಅನೇಕರು ಭಾವಿಸಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ. ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ದಯವಿಟ್ಟು ಈ ಟ್ವೀಟನ್ನು ಅನ್ಯಥಾ ಭಾವಿಸಬೇಡಿ. ಅಭಿಮಾನಿಗಳಿಗೆ ನೋವಾಗಿದ್ದರೆ ನಿಸ್ಸಂಶಯವಾಗಿ ಕ್ಷಮೆ ಯಾಚಿಸುತ್ತೇನೆ. ಪುನೀತ್ ಅವರ ಅಭಿಮಾನಿಯಾಗಿ ಇದು ನನ್ನ ಕರ್ತವ್ಯವೂ ಹೌದು.🙏 pic.twitter.com/JRd3Bt4g8o
— Chakravarty Sulibele (Modi Ka Pariwar) (@astitvam) August 1, 2022