ಚಾಲೆಂಜಿAಗ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ, ಅಭಿಮಾನಿಗಳ ಪ್ರೀತಿಯ ಡಿ ಬಾಸ್ ದರ್ಶನ್ ತೂಗದೀಪ್ ಅವರ ಕ್ರಾಂತಿ ಸಿನಿಮಾ ಯಾವಾಗ ಬಿಡುಗಡೆ ಆಗುತ್ತೋ ಎಂದು ಅಭಿಮಾನಿಗಳು ಕಾತರದಿಂದ ಕಾಯ್ತಾ ಇದ್ದಾರೆ.
ಈ ನಡುವೆ ತಮ್ಮ ಪ್ರೀತಿಯ ಅಭಿಮಾನಿಗಳು ಮಾಡಿರುವ ಪೋಸ್ಟ್ ವೊಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊAಡಿರುವ ಡಿ ಬಾಸ್ ಅಭಿಮಾನಿಗಳ ಪ್ರೀತಿಗೆ ಸದಾ ಋಣಿ ಎಂದಿದ್ದಾರೆ.
ಹಾಗಾದ್ರೆ ಮೊದಲಿಗೆ ಅಭಿಮಾನಿಗಳು ಏನ್ ಪೋಸ್ಟ್ ಹಾಕಿದ್ದರು ಅಂತ ನೋಡೋಣ:
`ಕ್ರಾಂತಿ ಸಿನಿಮಾಗೆ ಪ್ರಚಾರದ ಸಮಸ್ಯೆಗಳು ಎದುರಾಗಬಹುದು. ಕನ್ನಡ ಮಾಧ್ಯಮ ಕ್ರಾಂತಿ ಸಿನಿಮಾವನ್ನು ಬೆಂಬಲಿಸುವುದಿಲ್ಲ. ಮತ್ತೊಂದೆಡೆ ಬಾಸ್ಗೆ ಬೇರೆ ನಟರಂತೆ ಪ್ರಚಾರ ತಂಡವೂ ಇಲ್ಲ. ನಾವು ಬಾಸ್ ಅಭಿಮಾನಿಗಳು ಕ್ರಾಂತಿ ಸಿನಿಮಾದೊಂದಿಗೆ ನಿಲ್ಲಬೇಕು ಮತ್ತು ಯಶಸ್ವಿಗೊಳಿಸಬೇಕು. ಕ್ರಾಂತಿ: ಡಿ ಬಾಸ್ ಅಭಿಮಾನಿಗಳ ಸ್ವಾಭಿಮಾನದ ಗೆಲುವಾಗಬೇಕು’ ಎಂದು ಡಿ ಬಾಸ್ ಅಭಿಮಾನಿಗಳು ಪೋಸ್ಟರ್ನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊAಡಿದ್ದರು.
ಈ ಪೋಸ್ಟರ್ನ್ನು ಕನ್ನಡ ಮತ್ತು ಇಂಗ್ಲೀಷ್ನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಡಿ ಬಾಸ್ ಬಾಯ್ಸ್ ವೈರಲ್ ಮಾಡಿದ್ದರು.
ಈ ಎರಡೂ ಪೋಸ್ಟರ್ನ್ನೂ ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊAಡಿರುವ ಡಿ ಬಾಸ್ ದರ್ಶನ್ ಅವರು `ನನ್ನ ಪ್ರೀತಿಯ ಸೆಲೆಬ್ರೆಟಿಗಳಿಗೆ ನಾನು ಸದಾ ಚಿರಋಣಿ’ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
ನಾ ನಡೆಯೋ ಹಾದಿಯಲ್ಲಿ ನನ್ನೊಂದಿಗೆ ಸದಾ ನಿಲ್ಲುವ ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನಾನು ಸದಾ ಚಿರಋಣಿ. ನೀವು ನನಗೆ ನೀಡುತ್ತಿರುವ ಸಾಥ್ ಗೆ ನಾನು ಆಭಾರಿಯಾಗಿದ್ದೇನೆ, ನಿಮ್ಮ ಈ ಪ್ರೀತಿಯನ್ನು ವರ್ಣಿಸಲು ಬಹುಕೋಟಿ ಪದಗಳೇ ಸಾಲದು.
– ನಿಮ್ಮ ದಾಸ ದರ್ಶನ್
ಎಂದು ಬರೆದುಕೊಂಡಿದ್ದಾರೆ.
ಕೋವಿಡ್ ಬಳಿಕ ಕನ್ನಡ ಸಿನಿಮಾ ರಂಗದಲ್ಲಿ ಸೂಪರ್ ಡೂಪರ್ ಹಿಟ್ ಆಗಿ ೧೦೦ ಕೋಟಿ ರೂಪಾಯಿ ಕಲೆಕ್ಷನ್ ಕ್ಲಬ್ಗೆ ಸೇರಿದ ಮೊಟ್ಟ ಮೊದಲ ಸಿನಿಮಾವೇ ರಾಬರ್ಟ್. ಈ ಮೂಲಕ ಕೋವಿಡ್ ಲಾಕ್ಡೌನ್ ಬಳಿಕ ಫಿಲ್ಮ್ ಇಂಡಸ್ಟಿç ಕಥೆ ಏನೋ ಎಂದು ಆತಂಕಗೊAಡಿದ್ದ ಗಾಂಧಿನಗರಕ್ಕೆ ಹೊಸ ಚೈತನ್ಯ, ಉತ್ಸಾಹ ತುಂಬಿದ್ದು ರಾಬರ್ಟ್ ಸಿನಿಮಾ ಎಂದರೆ ತಪ್ಪಲ್ಲ.
ರಾಬರ್ಟ್ ಬಳಿಕ ಈಗ ಕ್ರಾಂತಿ ಸಿನಿಮಾ ಮೂಲಕ ಮತ್ತೆ ಬಾಕ್ಸ್ ಆಫೀಸ್ ಸುಲ್ತಾನನಾಗಿ ಮೆರೆಯಲು ಡಿ ಬಾಸ್ ರೆಡಿ ಆಗ್ತಿದ್ದಾರೆ. ಕ್ರಾಂತಿಯಲ್ಲಿ ರಚಿತಾ ರಾಮ್ ದರ್ಶನ್ ಅವರಿಗೆ ನಾಯಕಿ. ಕ್ರೇಜಿಸ್ಟಾರ್ ರವಿಚಂದ್ರನ್ ಕೂಡಾ ಸಿನಿಮಾದಲ್ಲಿರುವುದು ಮತ್ತೊಂದು ವಿಶೇಷ. ಸಂಗೀತ ನಿರ್ದೇಶಕರೂ ಆಗಿರುವ ವಿ ಹರಿಕೃಷ್ಣ ಕ್ರಾಂತಿಯನ್ನು ಡೈರೆಕ್ಟ್ ಮಾಡ್ತಿದ್ದಾರೆ. ಶೈಲಜಾ ನಾಗ್ ಮತ್ತು ಬಿ ಸುರೇಶ್ ಬಾಬು ಸಿನಿಮಾಕ್ಕೆ ದುಡ್ಡು ಹಾಕಿದ್ದಾರೆ.
ರಾಬರ್ಟ್ನಂತೆ ಕ್ರಾಂತಿ ಕೂಡಾ ಬಾಕ್ಸ್ ಆಫೀಸ್ನಲ್ಲಿ ಕ್ರಾಂತಿ ಮಾಡ್ಲಿ ಅನ್ನೋದೇ ಸಿನಿಮಾಭಿಮಾನಿಗಳ ಹಾರೈಕೆ