ಮನುಷ್ಯ ಹೇಗೆ ಜೀವಿಸಬೇಕು? ಹೇಗೆ ಇರಬಾರದು ಎಂಬ ವಿಷಯಗಳನ್ನು ಚಾಣಕ್ಯ (Chanakya)ನೀತಿ ಶಾಸ್ತ್ರದಲ್ಲಿ (Neeti Shastra)ವಿವರಿಸಿದ್ದಾರೆ. ಇದೇ ವೇಳೆ ಮನೆ ಯಜಮಾನ ಹೇಗಿರಬೇಕು ಎಂಬುದನ್ನು ವಿವಾರಿಸಿದ್ದಾರೆ.
# ಕುಟುಂಬ ಸದಸ್ಯರು ಮನೆ ಯಜಮಾನನ್ನು ನೋಡಿ ಎಲ್ಲವನ್ನು ಕಲಿಯುತ್ತಾರೆ. ಹೀಗಾಗಿ ಮನೆ ಯಜಮಾನ ಕೆಟ್ಟ ಚಟಗಳಿಂದ (Bad Habits)ದೂರ ಇರಬೇಕು.
# ಮನೆಯ ಜವಾಬ್ದಾರಿಯೆಲ್ಲಾ ಮನೆ ಯಜಮಾನನ ಮೇಲಿರುವ ಕಾರಣ, ಅವರು ಆರೋಗ್ಯದ (Health)ಕಡೆ ಹೆಚ್ಚು ಜಾಗ್ರತೆ ವಹಿಸಬೇಕು.
#ಮನೆ ಯಜಮಾನ ಆರೋಗ್ಯವಾಗಿ ಇದ್ದಲ್ಲಿ ಕುಟುಂಬದ ಆರೋಗ್ಯ ಕೂಡ ಚನ್ನಾಗಿ ಇರುತ್ತದೆ.
# ಯಾವುದೇ ವಿಷಯ ಇರಲಿ ಕುಟುಂಬ ಸದಸ್ಯರ ಜೊತೆ ಚರ್ಚಿಸಬೇಕು. ಅವರ ಕಷ್ಟ ಸುಖಗಳನ್ನು, ಸಮಸ್ಯೆಗಳನ್ನು ಕೇಳಿ ತಿಳಿದುಕೊಳ್ಳಬೇಕು. ಆ ಸಮಸ್ಯೆಗಳನ್ನು ಬಗ್ಗೆ ಹರಿಸಬೇಕು.
# ಸೋದರ, ಸೋದರಿಯರ (Brothers and Sisters)ಜೊತೆ ಸತ್ಸಂಬಂಧ ಮುಂದುವರೆಸಬೇಕು. ಆಸ್ತಿ ತಗಾದೆ ಅಥವಾ ಯಾವುದೋ ಒಂದು ಮಾತಿನಿಂದ ದೂರ ಆಗಬಾರದು.
#ಆಹಾರ ವ್ಯರ್ಥ (Wastage of food)ಮಾಡಬಾರದು. ಮನೆಯವರಿಗೆ ಅಗತ್ಯ ಇರುವಷ್ಟು ಅಡುಗೆ ಮಾಡಬೇಕು. ಹೆಚ್ಚು ಅಡುಗೆ ಮಾಡಿ, ಬಿಸಾಕುವಂತಾಗಬಾರದು. ನೀವು ಹೀಗೆ ಮಾಡಿದಲ್ಲಿ ಮಕ್ಕಳಿಗೆ ಅನ್ನದ ಬೆಲೆ ತಿಳಿಯುವುದಿಲ್ಲ.
# ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಬಾರದು. ಸಂಪಾದನೆ ಮಾಡಿರುವ ಹಣವನ್ನು ಜಾಣತನದಿಂದ ಖರ್ಚು ಮಾಡಬೇಕು. ಕಡ್ಡಾಯವಾಗಿ ಉಳಿತಾಯ (Savings) ಮಾಡಬೇಕು. ದುಬಾರಿ ಖರ್ಚು ಮಾಡಿದಲ್ಲಿ ಕುಟುಂಬ (Family)ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತದೆ.