ಉತ್ತರಾಖಂಡದಲ್ಲಿ ಈ ವರ್ಷದ ಚಾರ್ ಧಾಮ್ ಯಾತ್ರೆ ಕೈಗೊಂಡಿರುವ ಯಾತ್ರಾರ್ಥಿಗಳ ಪೈಕಿ ಈವರೆಗೆ 39 ಮಂದಿ ಮೃತಪಟ್ಟಿದ್ದಾರೆ. ದೈಹಿಕವಾಗಿ ಸದೃಢವಾಗಿಲ್ಲದಿದ್ದರೆ ಯಾತ್ರೆಗೆ ಬರಬೇಡಿ ಎಂದು ಅಲ್ಲಿನ ಸರ್ಕಾರ ಭಕ್ತಾದಿಗಳಿಗೆ ಸೂಚಿಸಿರುವುದಾಗಿ ಎಎನ್‌ಐ ಟ್ವೀಟ್ ಮಾಡಿದೆ.
ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿತ ಸಮಸ್ಯೆ ಹಾಗೂ ಮೌಂಟೇನ್ ಸಿಕ್‌ನೆಸ್ ನಿಂದಾಗಿ ಯಾತ್ರಿಕರು ಸಾವನ್ನಪ್ಪುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇ 3 ರಿಂದ ಚಾರ್ ಧಾಮ್ ಯಾತ್ರೆ ಆರಂಭವಾಗಿದ್ದು, ಎರಡು ವಾರ ಕಳೆಯುವಷ್ಟರಲ್ಲೇ 39 ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ.
ವೈದ್ಯಕೀಯ ಪರೀಕ್ಷೆಯಲ್ಲಿ ಸದೃಢವಾಗಿಲ್ಲವೆಂದಾದರೆ ಯಾತ್ರೆಗೆ ಬರಬೇಡಿ ಎಂದು ಈಗಾಗಲೇ ಯಾತ್ರಾರ್ಥಿಗಳಿಗೆ ಸೂಚಿಸಲಾಗಿತ್ತು ಎಂದು ಆರೋಗ್ಯ ಇಲಾಖೆಯ ಡಿಜಿ ಡಾ. ಶೈಲಜಾ ಭಟ್ ತಿಳಿಸಿದ್ದಾರೆ.
ಈ ವರ್ಷ ಚಾರ್ ಧಾಮ್ ಯಾತ್ರೆಗೆ ಹಿಂದೆಂದಿಗಿಂತಲೂ ಹೆಚ್ಚು ಜನಸಂದಣಿ ಏರ್ಪಟ್ಟಿದೆ. 18 ಮಂದಿ ಚಾರಣದ ಸಮಯದಲ್ಲೇ ಹೃದಯಾಘಾತದಿಂದ ಅಸುನೀಗಿದ್ದಾರೆ.
https://youtu.be/PIY7X7wa7QM