ADVERTISEMENT
ಈ ವರ್ಷದ ಅಂತ್ಯದಲ್ಲಿ ವಿಧಾನಸಭಾ ಚುನಾವಣೆ (Assembly Election) ನಡೆಯಲಿರುವ ಛತ್ತೀಸ್ಗಢ (Chattisgarh) ರಾಜ್ಯದ ಚುನಾವಣಾ ಚಿತ್ರಣ ಸಂಬಂಧ ಪ್ರಮುಖ ಚುನಾವಣಾ ಸಮೀಕ್ಷಾ ಸಂಸ್ಥೆ ಲೋಕ್ಪೋಲ್ (Lokpoll) ತನ್ನ ಹೊಸ ಸಮೀಕ್ಷೆಯನ್ನು (Assembly Survey) ಪ್ರಕಟಿಸಿದೆ.
ಕಾಂಗ್ರೆಸ್ (Congress) ಶೇಕಡಾ 43ರಿಂದ 45ರಷ್ಟು ಮತಗಳನ್ನು ಪಡೆಯಬಹುದು. ಬಿಜೆಪಿ (BJP) ಶೇಕಡಾ 37ರಿಂದ 39ರಷ್ಟು ಮತಗಳನ್ನು ಪಡೆಯಬಹುದು ಮತ್ತು ಬಿಎಸ್ಪಿ (BSP) ಶೇಕಡಾ 4ರಿಂದ 6ರಷ್ಟು ಮತಗಳನ್ನು ಪಡೆಬಹುದು ಮತ್ತು ಜೆಸಿಸಿ (JCC) ಶೇಕಡಾ 3ರಿಂದ 5ರಷ್ಟು ಮತಗಳನ್ನು ಪಡೆಬಹುದು ಎಂದು ಅಂದಾಜಿಸಲಾಗಿದೆ.
ಈ ಶೇಕಡಾವಾರು ಮತಗಳನ್ನು ಸೀಟುಗಳಿಗೆ ಬದಲಾಯಿಸದರೆ ಆಗ
ಕಾಂಗ್ರೆಸ್ 56ರಿಂದ 60 ಸೀಟುಗಳನ್ನು ಗೆಲ್ಲಬಹುದು. ಬಿಜೆಪಿ ಕೇವಲ 25ರಿಂದ 29 ಸೀಟುಗಳನ್ನು ಗೆಲ್ಲಬಹುದು. ಬಿಎಸ್ಪಿ 1-2 ಸೀಟುಗಳನ್ನು ಗೆಲ್ಲಬಹುದು ಹಾಗೂ ಜೆಸಿಸಿ 0-1 ಸ್ಥಾನಗಳನ್ನು ಗೆಲ್ಲಬಹುದು.
ಜೂನ್ 1ರಿಂದ ಜುಲೈ 5ರವರೆಗೆ 1 ತಿಂಗಳು ನಡೆಸಿರುವ ಚುನಾವಣಾ ಸಮೀಕ್ಷೆಯ ಪ್ರಕಾರ ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಭೂಪೇಶ್ ಬಘೇಲ್ (CM Bhupesh Baghel) ನೇತೃತ್ವದಲ್ಲಿ ಸತತ ಎರಡನೇ ಬಾರಿ ಪ್ರಚಂಡ ಜಯದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಅಂದಾಜಿಸಲಾಗಿದೆ.
ADVERTISEMENT