ಕರ್ನಾಟಕ ಬಳಿಕ ಕಾಂಗ್ರೆಸ್ ಮತ್ತೊಂದು ರಾಜ್ಯವನ್ನು ತನ್ನ ಬಳಿಯೇ ಉಳಿಸಿಕೊಳ್ಳಲಿದೆ ಎಂದು ಚುನಾವಣಾ ವಿಶ್ಲೇಷಕರು ಅಂದಾಜಿಸಿದ್ದಾರೆ.
ಈ ವರ್ಷದ ಅಂತ್ಯದಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ಚುನಾವಣೆ ನಡೆಯಲಿದೆ.
2018ರಲ್ಲಿ ಪ್ರಚಂಡ ಬಹುಮತದೊಂದಿಗೆ ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು.
ಒಟ್ಟು 90 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 68 ಸ್ಥಾನಗಳನ್ನು ಗೆದ್ದು ಪ್ರಚಂಡ ಜಯ ಗಳಿಸಿತ್ತು. ಬಿಜೆಪಿ 15 ಸ್ಥಾನ ಗೆದ್ದಿತ್ತು. ಇತರರು 7 ಸ್ಥಾನಗಳನ್ನು ಗೆದ್ದಿದ್ದರು.
ಪ್ರಮುಖ ಚುನಾವಣಾ ವಿಶ್ಲೇಷ ಸಂಸ್ಥೆ ಗ್ರೌಂಡ್ ಝಿರೋ ರಿಸರ್ಚ್ ಪ್ರಕಾರ ಈ ಬಾರಿಯೂ ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ.
ಜಿಝಡ್ಆರ್ ಸಂಸ್ಥೆಯ ಶಶಿ ಶಂಕರ್ ಸಿಂಗ್ ಅವರು ಎರಡು ಲೆಕ್ಕಾಚಾರವನ್ನು ಮುಂದಿಟ್ಟಿದ್ದಾರೆ.
ಶಾಸಕರ ಸಾಧನೆಯನ್ನು ಆಧರಿಸಿ ಚುನಾವಣೆ ಎದುರಿಸಿದರೆ:
ಕಾಂಗ್ರೆಸ್: 46, ಬಿಜೆಪಿ: 42 ಮತ್ತು ಇತರರು: 02 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ.
ಮುಖ್ಯಮಂತ್ರಿ ಮುಖದ ಆಧಾರದಲ್ಲಿ ಚುನಾವಣೆಗೆ ಹೋದರೆ:
ಕಾಂಗ್ರೆಸ್: 55, ಬಿಜೆಪಿ: 34, ಇತರೆ: 1 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಶಶಿ ಶಂಕರ್ ಸಿಂಗ್ ಅಂದಾಜಿಸಿದ್ದಾರೆ.
ಕಳೆದ ಐದು ವರ್ಷಗಳಿಂದ ಭೂಪೇಂದ್ರ ಸಿಂಗ್ ಬಘೇಲ್ ಅವರು ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಆಗಿದ್ದಾರೆ.
ADVERTISEMENT
ADVERTISEMENT