ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್ ಅವರು ಇವತ್ತು ತಮ್ಮ ರಾಜಕೀಯ ಗುರು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಚಾಂದ್ರಮಾನ ಯುಗಾದಿಯ ಶುಭ ದಿನದಂದು ನನ್ನ ರಾಜಕೀಯ ಗುರುಗಳು, ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಎಸ್.ಎಂ.ಕೃಷ್ಣ ಅವರ ಸ್ವಗೃಹಕ್ಕೆ ತೆರಳಿ ಬೇವು-ಬೆಲ್ಲ ಹಂಚಿಕೊಂಡು ನೂತನ ಸಂವತ್ಸರದ ಶುಭಾಶಯ ತಿಳಿಸಿದೆ. ಸಾರ್ವಜನಿಕ ಜೀವನದಲ್ಲಿನ ಅವರ ಸುದೀರ್ಘ ಅನುಭವ, ಅಗಾಧವಾದ ಜ್ಞಾನವನ್ನ ಹಂಚಿಕೊಳ್ಳುತ್ತಾ ಅವರೊಂದಿಗೆ ಕೆಲ ಕಾಲ ಕಳೆಯುವುದೇ ಒಂದು ವಿಶಿಷ್ಟ ಅನುಭವ.
ಎಂದು ಭೇಟಿ ಬಳಿಕ ಸುಧಾಕರ್ ಅವರು ಪ್ರತಿಕ್ರಿಯಿಸಿದ್ದಾರೆ.