ಇಡೀ ಜಗತ್ತಿನಲ್ಲಿ ಕೊರೋನಾ ಹಾವಳಿ ಹೆಚ್ಚು ಕಡಿಮೆ ನಿಂತಿದೆ. ಆದರೆ, ಕೊರೋನಾ ತವರು ಚೀನಾದಲ್ಲಿ ಕೊರೋನಾ ತಾಂಡವ ಮುಂದುವರೆದಿದೆ.
ಕೊರೋನಾ ಜೀರೋ ಟಾಲೆರೆನ್ಸ್ ಹೆಸರಲ್ಲಿ ತನ್ನ ಪ್ರಜೆಗಳಿಗೆ ಚೀನಾ ಇನ್ನಿಲ್ಲದ ಕಿರುಕುಳ ನೀಡುತ್ತಿದೆ.
ಷಾಂಘೈ.. ಎರಡೂವರೆ ಕೋಟಿ ಜನರು ಇರುವ ಮಹಾ ನಗರ.. ಇಲ್ಲಿ ಪ್ರತಿ ನಾಲ್ವರಲ್ಲಿ ಮೂವರಿಗೆ ಕೊರೋನಾ ಸೋಂಕು ತಗುಲಿದೆ. ಷಾಂಘೈನಲ್ಲಿ ಹಿಂದೆಂದು ಇಲ್ಲದ ರೀತಿಯ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಪರಿಣಾಮ ಅತ್ಯಧಿಕ ಜನಸಾಂದ್ರತೆ ಇರುವ ಈ ನಗರದ ಬೀದಿಗಳು ಈಗ ನಿರ್ಮಾನುಷವಾಗಿವೆ. ಅಗತ್ಯ ತುರ್ತುಸೇವೆ, ಆಸ್ಪತ್ರೆ ಸೇವೆಗಳು, ಆಹಾರ ಸಕಾಲಕ್ಕೆ ಲಭ್ಯ ಆಗದೇ ಜನ ಒದ್ದಾಡುತ್ತಿದ್ದಾರೆ. ಪ್ರತಿಭಟನೆಯ ಸ್ವರಗಳು ಕೇಳಿಬರುತ್ತಿವೆ.
ಚೀನಾ ಸರ್ಕಾರ ರೋಬೋ ಡಾಗ್ ಮೂಲಕ ಜನತೆಗೆ ಪ್ರಕಟಣೆಗಳನ್ನು ತಿಳಿಸುತ್ತಿದೆ. ರೋಬೋಗಳನ್ನು ಗಸ್ತು ತಿರುಗಲು ನಿಯೋಜಿಸುತ್ತಿದೆ. ಪೊಲೀಸರನ್ನು ಕೂಡ ಬೀದಿಗೆ ಇಳಿಸುತ್ತಿಲ್ಲ. ಆಗಾಗ ಆಂಬ್ಯುಲೆನ್ಸ್ ಸದ್ದು ಬಿಟ್ಟರೇ ಬೇರೇ ಸದ್ದೇ ಕೇಳಿಬರಲ್ಲ. ಒಂದು ರೀತಿಯಲ್ಲಿ ಷಾಂಘೈ ಘೋಸ್ಟ್ ಸಿಟಿಯಾಗಿ ಮಾರ್ಪಟ್ಟಿದೆ.
ಸಾಕು ನಾಯಿಗಳಿಗೆ ವಾಕಿಂಗ್ ಮಾಡಿಸಲು, ಅದರ ದೈನಂದಿನ ಚಟುವಟಿಕೆ ಪೂರೈಸಲು ಅದರ ಮಾಲೀಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.