ADVERTISEMENT
ಚೀನಾದಲ್ಲಿ ಸಂಭವಿಸಿರುವ ಪ್ರಬಲ ಭೂಕಂಪದಲ್ಲಿ 116 ಮಂದಿ ಸಾವನ್ನಪ್ಪಿದ್ದಾರೆ. ಉತ್ತರ ಚೀನಾದಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ.
ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.2ರಷ್ಟು ದಾಖಲಾಗಿದೆ. ಭೂಕಂಪದ ತೀವ್ರತೆಗೆ ಉತ್ತರ ಚೀನಾದಲ್ಲಿ ಬೃಹತ್ ಕಟ್ಟಡಗಳು ಮತ್ತು ಮನೆಗಳು ನೆಲಕ್ಕುರುಳಿವೆ.
ರಕ್ಷಣಾ ಕಾರ್ಯಾಚರಣೆ ತೀವ್ರಗತಿಯಲ್ಲಿ ಸಾಗಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರು ಆಸ್ತಿ-ಪಾಸ್ತಿ ಮತ್ತು ಜೀವ ರಕ್ಷಣೆಯ ಭರವಸೆ ನೀಡಿದ್ದಾರೆ.
ಭೂಕಂಪನ ಚೀನಾಕ್ಕೆ ಹೊಸತೇನಲ್ಲ. ಈ ವರ್ಷವೇ ಮೂರು ಬಾರಿ ಪ್ರಬಲ ಭೂಕಂಪನವಾಗಿದೆ.
ಆಗಸ್ಟ್ನಲ್ಲಿ ಚೀನಾದಲ್ಲಿ ಸಂಭವಿಸಿದ ಭೂಕಂಪದಲ್ಲಿ 23 ಮಂದಿ ಗಾಯಗೊಂಡಿದ್ದರು. ಸೆಪ್ಟೆಂಬರ್ನಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ 100 ಮಂದಿ ಸಾವನ್ನಪ್ಪಿದ್ದರು.
2008ರಲ್ಲಿ ಸಂಭವಿಸಿದ್ದ 7.9 ತೀವ್ರತೆಯ ಭೂಕಂಪದಲ್ಲಿ 87 ಸಾವಿರ ಮಂದಿ ಮೃತಪಟ್ಟಿದ್ದರು ಮತ್ತು ಕಣ್ಮರೆಯಾಗಿದ್ದರು.
ADVERTISEMENT