ಇವತ್ತು ಸಿಎಂ ಬಸವರಾಜ ಬೊಮ್ಮಾಯಿ (CM Basavraj Bommai) ಅವರ ಸರ್ಕಾರದ ಮೊದಲ ವರ್ಷದ ಜನಸ್ಪಂದನಾ (Janaspandana) ಕಾರ್ಯಕ್ರಮ ಅದ್ಧೂರಿಯಾಗಿ ದೊಡ್ಡಬಳ್ಳಾಪುರದಲ್ಲಿ (Doddaballapur) ನಡೆಯಲಿದೆ.
ಈ ನಡುವೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ತಮ್ಮದೇ ಕ್ಷೇತ್ರದ (ಶಿಗ್ಗಾಂವ-ಸವಣೂರು) (Shiggaon Savanur) ಮಠ (Mutt) ಮತ್ತು ದೇವಸ್ಥಾನಗಳಿಗೆ (Hindu Temples) ಭರಪೂರ ಅನುದಾನ (Grants) ಬಿಡುಗಡೆಗೊಳಿಸಿ ನಿನ್ನೆಯಷ್ಟೇ ಆದೇಶ ಹೊರಡಿಸಿದ್ದಾರೆ.
ಹಣಕಾಸು ಸಚಿವರೂ ಆಗಿರುವ ಸಿಎಂ ಬೊಮ್ಮಾಯಿ ಅವರ ಆಧೀನದಲ್ಲಿ ಬರುವ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ.
ತಮ್ಮದೇ ಕ್ಷೇತ್ರದಲ್ಲಿರುವ ಬರುವ 15 ದೇವಸ್ಥಾನ ಮತ್ತು ಮಠಗಳಿಗೆ ಸಿಎಂ ಬೊಮ್ಮಾಯಿ ಅನುದಾನ ಬಿಡುಗಡೆ ಮಾಡಿಸಿಕೊಂಡಿರುವುದು ವಿಶೇಷ. ಒಟ್ಟು 7 ಕೋಟಿ 61 ಲಕ್ಷ ರೂಪಾಯಿ ಅನುದಾನದ ಪೈಕಿ ತಮ್ಮದೇ ಕ್ಷೇತ್ರದ ದೇವಸ್ಥಾನ ಮತ್ತು ಮಠಗಳಿಗೆ ಸಿಎಂ ಬೊಮ್ಮಾಯಿ 6 ಕೋಟಿ 31 ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದಾರೆ.
1. ದ್ಯಾವಮ್ಮ ಆದಿಶಕ್ತಿ ದೇವಸ್ಥಾನ, ಬಸವನಾಳ, ಶಿಗ್ಗಾಂವ – 1 ಲಕ್ಷ ರೂ.
2. ಬೈಲಬಸವೇಶ್ವರ ಸಮುದಾಯ ಭವನ, ಚಿಕ್ಕಬೆಂಡಗೇರಿ, ಶಿಗ್ಗಾಂವ – 50 ಲಕ್ಷ ರೂ.
3. ದ್ಯಾವಮ್ಮ ದೇವಿ ದೇವಸ್ಥಾನ, ಮನ್ನಂಗಿ ಗ್ರಾಮ, ಸವಣೂರು ತಾಲ್ಲೂಕು – 50 ಲಕ್ಷ ರೂ.
4. ಮೈಲಾರ ಲಿಂಗೇಶ್ವರ ದೇವಸ್ಥಾನ, ಕುಣಿಮೆಳ್ಳಿಹಳ್ಳಿ, ಸವಣೂರು ತಾಲ್ಲೂಕು – 25 ಲಕ್ಷ ರೂ.
5. ಮಾರುತಿ ದೇವಸ್ಥಾನ, ಅಲ್ಲಿಪುರ, ಸವಣೂರು ತಾಲ್ಲೂಕು – 50 ಲಕ್ಷ ರೂಪಾಯಿ
6. ದುಂಡಿ ಬಸವೇಶ್ವರ ದೇವಸ್ಥಾನ, ತಡಸ ಗ್ರಾಮ, ಶಿಗ್ಗಾಂವ ತಾಲ್ಲೂಕು – 30 ಲಕ್ಷ ರೂ.
7. ರಾಮೇಶ್ವರ ದೇವಸ್ಥಾನದ ಸಮುದಾಯ ಭವನ, ಮೆಳ್ಳಾಗಟ್ಟಿ, ಸವಣೂರು ತಾಲೂಕು – 20 ಲಕ್ಷ ರೂ.
8. ಕಲ್ಮೇಶ್ವರ ದೇವಸ್ಥಾನ, ತೊಂಡೂರು ಗ್ರಾಮ, ಸವಣೂರು ತಾಲ್ಲೂಕು – 50 ಲಕ್ಷ ರೂ.
9. ದ್ಯಾವಮ್ಮ ದೇವಿ ದೇವಸ್ಥಾನ – ಶಿಗ್ಗಾಂವ ಗ್ರಾಮ – 50 ಲಕ್ಷ ರೂಪಾಯಿ
10. ಮೌನೇಶ್ವರ ಮಠ, ಹುಲಗೂರ ಗ್ರಾಮ, ಶಿಗ್ಗಾಂವ – 30 ಲಕ್ಷ ರೂ.
11. ಗಾಯತ್ರಿ ಮಠ, ತಡಸ ಗ್ರಾಮ, ಶಿಗ್ಗಾಂವ – 1 ಕೋಟಿ ರೂ.
12. ಗುರು ನಂಜೇಶ್ವರ ಸಿಂಧಗಿ ಮಠ, ಹೋತನಹಳ್ಳಿ ಗ್ರಾಮ, ಶಿಗ್ಗಾಂವ ತಾಲ್ಲೂಕು – 75 ಲಕ್ಷ ರೂ.
13. ಭಾವನಮಠ, ಶಿಗ್ಗಾಂವ – 25 ಲಕ್ಷ ರೂ.
14. ಕರಿಸಿದ್ದೇಶ್ವರ ಮಠ, ಹೊನ್ನಾಪುರ ಗ್ರಾಮ, ಶಿಗ್ಗಾಂವ – 50 ಲಕ್ಷ ರೂ.
15. ಸಿದ್ದರಾಮೇಶ್ವರ ಹಿರೇಮಠ, ಕೆರೂಟಗಿ ಗ್ರಾಮ, ದೇವರಹಿಪ್ಪರಗಿ, ವಿಜಯಪುರ ಜಿಲ್ಲೆ – 50 ಲಕ್ಷ ರೂ.
16. ಗುದ್ನೇಶ್ವರ ಮಠ, ಬಸವನಾಳ, ಶಿಗ್ಗಾಂವ – 25 ಲಕ್ಷ ರೂ.
17. ವೇದಮೂರ್ತಿ ಸಂಗಯ್ಯ ಮುತ್ಯನ ಮಠ, ಜೈನಾಪುರ, ಬಸವನಬಾಗೇವಾಡಿ, ವಿಜಯಪುರ ಜಿಲ್ಲೆ -30 ಲಕ್ಷ ರೂ.
18. ಮಾರಿಕಾಂಬ ದೇವಸ್ಥಾನ, ಮಳಲಗದ್ದೆ, ಸೊರಬ, ಶಿವಮೊಗ್ಗ ಜಿಲ್ಲೆ – 50 ಲಕ್ಷ ರೂ.
ADVERTISEMENT
ADVERTISEMENT