ಪಂಜಾನ್ನ ಎಎಪಿ ಪಕ್ಷದ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ (CM Bhagwanth Mann) ಅವರು ವಿಮಾನದಲ್ಲಿ ಪ್ರಯಾಣಿಸಲು ಯೋಗ್ಯವಾಗಿಲ್ಲ ಎಂದು ಪರಿಗಣಿಸಿ ಫ್ರಾಂಕ್ಪರ್ಟ್ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಬೇಕಿದ್ದ ಲುಫ್ಸಾನಾ ವಿಮಾನದಿಂದ ಕೆಳಗಿಳಿಸಲಾಗಿದೆ ಎಂಬ ವಿವಾದ ಭುಗಿಲೆದ್ದಿದೆ.
ಫ್ರಾಂಕ್ಫರ್ಟ್ನಿಂದ ವಿಮಾನವು ಶನಿವಾರ ಮಧ್ಯಾಹ್ನ 1.40 ಕ್ಕೆ (GMT+2) ಹೊರಟು 12.55 AM IST (GMT+5.30) ಕ್ಕೆ ದೆಹಲಿಗೆ ಬಂದು ಇಳಿಯಲಿದೆ ಎಂದು ಲುಫ್ಥಾನ್ಸ ವೆಬ್ಸೈಟ್ ನಲ್ಲಿ ಹೇಳಲಾಗಿದೆ. ಆದಾಗ್ಯೂ, ವಿಮಾನವು ಫ್ರಾಂಕ್ಫರ್ಟ್ನಿಂದ 5.52 PM (GMT+2) ಕ್ಕೆ ಹೊರಟು, ಇಂದು 4.30 AM IST (GMT+5.30) ಕ್ಕೆ ದೆಹಲಿಗೆ ಬಂದಿಳಿದಿದೆ.
ಈ ಬಗ್ಗೆ ದೆಹಲಿ ಮಾಧ್ಯಮ ಸಂವಹನ ನಿರ್ದೇಶಕ ಚಂದರ್ ಸುತಾ ಡೋಗ್ರಾ ಮಾತನಾಡಿ, ಮುಖ್ಯಮಂತ್ರಿ ಭಗವಂತ್ ಸಿಂಗ್ ಮನ್ (CM Bhagwanth Mann) ಸ್ವಲ್ಪ ಅಸ್ವಸ್ಥರಾಗಿದ್ದರು. ಇಂದು ಸೋಮವಾರ ರಾತ್ರಿ ದೆಹಲಿಗೆ ವಿಮಾನದ ಮೂಲಕ ಮರಳಿ ಬರಲಿದ್ದಾರೆ ಎಂದು ತಿಳಿಸಿದರು. ಪಕ್ಷದ ಚುನಾಯಿತ ಪ್ರತಿನಿಧಿಗಳನ್ನು ದೆಹಲಿಯಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಲಾಗುತ್ತಿದೆ. ಈ ಸಮಾವೇಶದಲ್ಲಿ ಮುಖ್ಯಮಂತ್ರಿ ಮನ್ ಮಾತನಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ : ಪಂಜಾಬ್ ಸಿಎಂ ಭಗವಂತ್ ಮನ್ ಮದುವೆ – ಪೋಟೋ ನೋಡಿ
ಮತ್ತೊಂದೆಡೆ, ಅದೇ ವಿಮಾನದಲ್ಲಿದ್ದ ಹೆಸರು ಹೇಳಲು ಇಚ್ಚಿಸದ ಭಾರತೀಯ ಸಹ-ಪ್ರಯಾಣಿಕರೊಬ್ಬರು, ಮುಖ್ಯಮಂತ್ರಿ ಮನ್ ಅವರು ತಮ್ಮ ಕಾಲಿನ ಮೇಲೆ ಸ್ಥಿರವಾಗಿ ನಿಲ್ಲದಷ್ಟು ಅತಿಯಾದ ಮಧ್ಯಪಾನ ಮಾಡಿದ್ದರು ಎಂದು ಆರೋಪಿಸಿದ್ದಾರೆ. ಅವರ ಪತ್ನಿ ಮತ್ತು ಭದ್ರತಾ ಸಿಬ್ಬಂದಿ ಈ ಸಮಯದಲ್ಲಿ ಸಿಎಂಗೆ ಬೆಂಬಲ ನೀಡಿದ್ದಾರೆ.
ವಿಮಾನದಲ್ಲಿ ತುಂಬಿದ್ದ ಸಿಎಂ ಪರಿವಾರದ ಲಗೇಜ್ಗಳನ್ನು ತೆಗೆಯಬೇಕಿದ್ದ ಕಾರಣ ವಿಮಾನ ಹೊರಡಲು 4 ಗಂಟೆ ತಡವಾಯಿತು ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಅಲ್ಲದೇ, ಮರುದಿನ ದೆಹಲಿಯಲ್ಲಿ ನಿಗದಿಯಾಗಿದ್ದ ಹಲವು ಪ್ರಮುಖ ಸಭೆಗಳಲ್ಲಿ ಮಾನ್ ಪಾಲ್ಗೊಳ್ಳಬೇಕಿತ್ತು. ಆ ಕಾರಣದಿಂದ ಪಂಜಾಬ್ ಸರ್ಕಾರದ ಅಧಿಕಾರಿಗಳು ಲುಫ್ಥಾನ ವಿಮಾನ ಸಿಬ್ಬಂದಿ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದರು. ಆದರೆ, ಸಿಬ್ಬಂದಿಗಳು ತಮ್ಮ ವಿಮಾನ ಸುರಕ್ಷತಾ ನಿಯಮಗಳಲ್ಲಿ ರಾಜಿ ಮಾಡಿಕೊಳ್ಳಲು ನಿರಾಕರಿಸಿದರು ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. ಇದನ್ನೂ ಓದಿ : ಪಂಜಾಬ್ : 18 ನೇ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್ ಪ್ರಮಾಣವಚನ ಸ್ವೀಕಾರ
ಈ ಬಗ್ಗೆ ಪ್ರತಿಕ್ರಿಯಿಸಿರುವ ಪಂಜಾಬ್ನ ಎಎಪಿ ವಕ್ತಾರ ಮಲ್ವಿಂದರ್ ಸಿಂಗ್, ಇದು ಸುಳ್ಳು. ಜನ ಗಾಳಿಸುದ್ಧಿಯನ್ನು ಹರಿಬಿಡುತ್ತಲೇ ಇರುತ್ತಾರೆ ಎಂದು ಹೇಳಿದ್ದಾರೆ.
ಸಿಎಂ ಕಚೇರಿಯ ಉಸ್ತುವಾರಿ ಮಾಧ್ಯಮದ ನವನೀತ್ ವಾಧ್ವಾ ಅವರ ಹತ್ತಿರದಲ್ಲಿರುವ ಸಿಎಂ ವೇಳಾಪಟ್ಟಿ ಪ್ರಕಾರ ಅವರು ಸೆ.18 ರಂದು ಜರ್ಮನಿಯಲ್ಲಿ ಇರಬೇಕಿತ್ತು. ಅಲ್ಲದೇ, ಸಿಎಂ ದೇಶಕ್ಕೆ ಮರಳಿ ಬರುವ ಯಾವುದೇ ಮಾಹಿತಿ ಈ ಪಟ್ಟಿಯಲ್ಲಿರಲಿಲ್ಲ. ಹೀಗಾಗಿ ಸಿಎಂ ಭಗವಂತ್ ಮನ್ ಅವರ ಈ ನಡೆ ವಿವಾದಕ್ಕೆ ಕಾರಣವಾಗಿದೆ.
ವಿಶ್ವದ ಪ್ರಮುಖ ವ್ಯಾಪಾರ ಸಮ್ಮೇಳನವಾದ DRINKTEC 2022ನಲ್ಲಿ ಭಾಗವಹಿಸಲು ಪಂಜಾಬ್ ಸಿಎಂ ಭಗವಂತ್ ಮನ್ (CM Bhagwanth Mann) ಸೆಪ್ಟಂಬರ್ 11 ರಂದು ತೆರಳಿದ್ದರು. ಮ್ಯೂನಿಚ್, ಫ್ರಾಂಕ್ಫರ್ಟ್ ಮತ್ತು ಬರ್ಲಿನ್ಗೆ ಭೇಟಿ ನೀಡಿದ ನಂತರ ಅವರು ಸೆಪ್ಟಂಬರ್ 18ರಂದು ದೇಶಕ್ಕೆ ಮರಳಬೇಕಿತ್ತು. ಸಿಎಂ ಜೊತೆ ಅವರ ಪತ್ನಿ, ಭದ್ರತಾ ಸಿಬ್ಬಂದಿ ಮತ್ತು ಸರ್ಕಾರ ಹಿರಿಯ ಅಧಿಕಾರಿಗಳು ಇದ್ದಾರೆ.
ಇದನ್ನೂ ಓದಿ : ಕಾಶ್ಮೀರದಲ್ಲಿ ಹತ್ಯೆ ವಿಚಾರ : ಬಿಜೆಪಿಯಿಂದ ಕಾಶ್ಮೀರ ನಿಭಾಯಿಸಲು ಸಾಧ್ಯವಿಲ್ಲ – ಅರವಿಂದ್ ಕೇಜ್ರಿವಾಲ್