ಸಿಎಂ ಬಸವರಾಜ ಬೊಮ್ಮಾಯಿಯವರ ದೆಹಲಿಗೆ 2 ದಿನಗಳ ಭೇಟಿ ನೀಡಲಿದ್ದಾರೆ. ಇದುವರೆಗೂ ಹಗ್ಗ-ಜಗ್ಗಾಟದಂತಿದ್ದ ಸಂಪುಟದ ಸರ್ಜರಿ ಇದೀಗ ಬಹುತೇಕ ನಡೆಯುವಂತೆ ಕಾಣುತ್ತಿದೆ. ಏಪ್ರೀಲ್ 8 ರಂದು ಸಂಪುಟದ ಪುನರ್ ರಚನೆಯ ಸಾಧ್ಯತೆ ದಟ್ಟವಾಗಿ ಕಂಡು ಬರುತ್ತಿದೆ.
ದೆಹಲಿಗೆ ಪ್ರಯಾಣಿಸಿರುವ ಸಿಎಂ ಬೊಮ್ಮಾಯಿ ಕೇಂದ್ರದ ಹಲವು ಸಚಿವರನ್ನು ಭೇಟಿಯಾಗಲಿದ್ದಾರೆ. ಪ್ರಮುಖವಾಗಿ ಮೇಕೆದಾಟು ವಿಚಾರವಾಗಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ. ಅನಂತರ ವರಿಷ್ಠರನ್ನು ಬೇಟಿಯಾಗಲಿರುವ ಬೊಮ್ಮಾಯಿ ಸಂಪುಟದ ಸರ್ಜರಿಗೆ ಅಂಕಿತ ಪಡೆಯಲಿದ್ದಾರೆ.
ಪ್ರಸ್ತುತ ಸಚಿವ ಸಂಪುಟದಲ್ಲಿ 4 ಸ್ಥಾನಗಳು ಕಾಲಿ ಇವೆ. ಈಗಿನ ಸಂಪುಟದಿಂದ 10 ಜನರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಎಲೆಕ್ಷನ್ ಹೊತ್ತಲ್ಲಿ ಸಚಿವ ಸಂಪುದ ಪುನರ್ ರಚನೆಯಾಘುತ್ತದೇ ಇದು ಬಹುತೇಕ ಎಲೆಕ್ಷನ್ ಸಚಿವ ಸಂಪುಟವಾಗಿರಲಿದೆ. ಜಾತಿ,ಮತ, ಸಂಘ ಹಾಗೂ ಪಕ್ಷಕ್ಕಾಗಿ ದುಡಿದವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆಯಾಗಿದೆ.
ಅಲ್ಲದೇ, ಈಗಿರುವ ಸಚಿವ ಸ್ಥಾನಗಳನ್ನು ಬದಲಾಯಿಸಿ, ಹೆಚ್ಚುವರಿ ಖಾತೆಗಳನ್ನು ಹಿಂಪಡೆದು ಹೊಸಬರಿಗೆ ನೀಡಲಾಗುತ್ತದೆ ಎನ್ನಲಾಗಿದೆ.
ಬಸವನಗೌಡ ಪಾಟೀಲ್ ಯತ್ನಾಳ್, ರೇಣುಕಾಚಾರ್ಯ, ರಾಜುಗೌಡ ಸೇರಿದಂತೆ ಹಲವು ಶಾಸಕರು ಮಂತ್ರಿ ಸ್ಥಾನಕ್ಕಾಗಿ ಒತ್ತಡ ಹಾಕುತ್ತಿದ್ದಾರೆ. ಸಿಎಂ ಬೊಮ್ಮಾಯಿಯವರು ಸಂಪುಟಕ್ಕೆ ಸರ್ಜರಿ ಮಾಡುತ್ತಾರೋ ಅಥವಾ ಪುನರ್ ಸಚಿವ ಸಂಪುಟದ ರಚನೆ ಮಾಡುತ್ತಾರೆಯೋ ಕಾದು ನೋಡಬೇಕಿದೆ.
https://youtu.be/4Yl2BhFmhuc