3 ಲಕ್ಷದ 27 ಸಾವಿರ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಆದಾಯ ಮೂಲದ ಬಗ್ಗೆ ಲೆಕ್ಕ ನೀಡಿದ್ದಾರೆ.
ಮೋಟಾರು ವಾಹನ ತೆರಿಗೆ: 11,500 ಕೋಟಿ ರೂಪಾಯಿ – ಆದಾಯದಲ್ಲಿ ಒಟ್ಟು ಪಾಲು ಶೇಕಡಾ 7ರಷ್ಟು
ನೋಂದಣಿ ಮತ್ತು ಮುದ್ರಾಂಕ ಶುಲ್ಕ: 25 ಸಾವಿರ ಕೋಟಿ ರೂಪಾಯಿ: ಆದಾಯದಲ್ಲಿ ಶೇಕಡಾ 14ರಷ್ಟು ಪಾಲು
ರಾಜ್ಯ ಅಬಕಾರಿ; 36,000 ಕೋಟಿ ರೂಪಾಯಿ – ಆದಾಯದಲ್ಲಿ ಶೇಕಡಾ 20ರಷ್ಟು ಪಾಲು
ಇತರೆ: 2,153 ಕೋಟಿ ರೂಪಾಯಿ – ಆದಾಯದಲ್ಲಿ ಶೇಕಡಾ 1ರಷ್ಟು ಪಾಲು
ವಾಣಿಜ್ಯ ತೆರಿಗೆ: 1,01,000 ಕೋಟಿ ರೂಪಾಯಿ- ಆದಾಯದಲ್ಲಿ ಶೇಕಡಾ 58ರಷ್ಟು ಪಾಲಿ
ಸಂಪನ್ಮೂಲ ಎಲ್ಲಿಂದ..? (ಪೈಸೆ ಲೆಕ್ಕಾಚಾರದಲ್ಲಿ)
ರಾಜ್ಯ ತೆರಿಗೆ ಆದಾಯ: 54 ಪೈಸೆ
ಸಾಲದಿಂದ: 26 ಪೈಸೆ
ಕೇಂದ್ರ ತೆರಿಗೆ ಪಾಲು: 12 ಪೈಸೆ
ಕೇಂದ್ರ ಸರ್ಕಾರದ ಸಹಾಯಧನ: 4 ಪೈಸೆ
ರಾಜ್ಯ ತೆರಿಗೆಯೇತರ ರಾಜಸ್ವದಿಂದ: 4 ಪೈಸೆ