ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಪಕ್ಷದ ಮಹಾಮೈತ್ರಿ ಕೂಟ ಸರ್ಕಾರ ಪತನ ಆಗಿದೆ.
2019ರ ಅಕ್ಟೋಬರ್ನಲ್ಲಿ ಅಸ್ತಿತ್ವಕ್ಕೆ ಬಂದ ಸರ್ಕಾರ ಮೂರು ವರ್ಷವನ್ನೂ ಪೂರೈಸಿದೇ ಆಪರೇಷನ್ ಕಮಲಕ್ಕೆ ಬಲಿ ಆಗಿದೆ
ಫೇಸ್ಬುಕ್ನಲ್ಲಿ ಲೈವ್ ಬಂದು ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತಾಡಿದ ಸಿಎಂ ಠಾಕ್ರೆ ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದರು.
ನಾಳೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಗೂ ಮೊದಲೇ ಸಿಎಂ ರಾಜೀನಾಮೆ ನೀಡಿರುವ ಕಾರಣ ನಾಳೆ ವಿಶ್ವಾಸಮತಯಾಚನೆ ನಡೆಯುವ ಸಾಧ್ಯತೆ ಇಲ್ಲ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಎನ್ಸಿಪಿ ನಾಯಕ ಶರದ್ ಪವಾರ್ ಅವರಿಗೆ ಧನ್ಯವಾದ ತಿಳಿಸಿದರು.
ನಾವು ರೈತರ ಸಾಲ ಮನ್ನಾ ಮಾಡಿದ್ವಿ. ಜಿಲ್ಲೆಗಳ ಮರು ನಾಮಕರಣ ಮೂಲಕ ಬಾಳಾಸಾಹೇಬ್ ಅವರ ಕನಸು ಈಡೇರಿಸಿದ್ದೇವೆ. ಎಲ್ಲೂ ಇಲ್ಲದವರನ್ನು ಪಕ್ಷ ದೊಡ್ಡ ವ್ಯಕ್ತಿಗಳನ್ನಾಗಿ ಮಾಡಿದೆ ಎನ್ನುವ ಮೂಲಕ ಬಂಡಾಯ ಶಾಸಕರಿಗೆ ತಿರುಗೇಟು ನೀಡಿದರು.